Dakshina Kannada: ಎರುಗುಂಡಿ ಫಾಲ್ಸ್‌ ಬಳಿ ಏಕಾಏಕಿ ನುಗ್ಗಿದ ನೀರು: ಪ್ರವಾಸಿಗರ ರಕ್ಷಣೆ ಮಾಡಿದ ಸ್ಥಳೀಯರು

Share the Article

Mangalore: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿಯ ಎರುಗುಂಡಿ ಫಾಲ್ಸ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ತುಂಬಿ ಹರಿಯುತ್ತಿರುವ ಫಾಲ್ಸ್‌ನ ಮೇಲೆ ಐವರು ಪ್ರವಾಸಿಗರು ತೆರಳಿದ್ದು, ಸ್ಥಳೀಯರು ಹೇಳಿದರೂ ಕೇಳದೆ ಹೋಗಿದ್ದಾರೆ. ಈ ಸಂದರ್ಭ ಏಕಾಏಕಿ ನೀರು ನುಗ್ಗಿದೆ. ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಎರುಗುಂಡಿ ಫಾಲ್ಸ್‌ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮದಲ್ಲಿ ಇದೆ. ಮುಂಗಾರು ಮಳೆಯ ಕಾರಣದಿಂದ ಫಾಲ್ಸ್‌ ತುಂಬಿ ಹರಿಯುತ್ತಿದೆ.

Comments are closed.