Mangaluru: ಮಂಗಳೂರು : ಈ ಬಾರಿಯೂ ಸ್ವಿಮ್ಮಿಂಗ್ ಪೂಲ್ ಆದ ಪಂಪ್ವೆಲ್ ಫ್ಲೈ ಓವರ್ ಕೆಳಭಾಗ!!

Mangaluru: ಮಂಗಳೂರಿನಲ್ಲಿ (Mangaluru) ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು ಪಂಪ್ವೆಲ್ ಸೇತುವೆಯ ಕೆಳಭಾಗ ಈ ವರ್ಷವೂ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸ್ವಿಮ್ಮಿಂಗ್ ಪೂಲ್ ನಂತಾದ ಪಂಪ್ ವೆಲ್ ನಲ್ಲಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ.

ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜಕಾಲುವೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿದೆ.
ಇದೀಗ ನಿರಂತರವಾಗಿ ಮಳೆ ನೀರು ಹರಿಯುತ್ತಿದ್ದು ಮುಂದೆ ಸಾರ್ವಜನಿಕರು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೋ ಎಂಬ ಆತಂಕ ಕೂಡಾ ಸೃಷ್ಟಿಯಾಗಿದೆ. ಇಲ್ಲಿ ದಿನನಿತ್ಯ ಟ್ರಾಫಿಕ್ ಜಾಂ ಸಮಸ್ಯೆ ಕೂಡಾ ಕಂಡುಬರುತ್ತಿದೆ.
Comments are closed.