Ranya Rao: ನಂಟಿಲ್ಲ ಎನ್ನುತ್ತಲೇ ಚಿನ್ನಕಳ್ಳಿ ರನ್ಯಾಳಿಗೆ ಕೈಗಂಟು ಇಕ್ಕಿದ ಹಾಂ ಹೂಂ ಗೃಹ ಸಚಿವ: ಪರoರನ್ನು ಇ.ಡಿ ಈಟಿಗೆ ಸಿಲುಕಿಸಿತೇ ವಿರೋಧಿ ಬಣ!?

Ranya Rao: ಬೆಂಗಳೂರು: ಏನಿಲ್ಲಾ, ಏನಿಲ್ಲಾ.. ನಿನ್ನ ನನ್ನ ನಡುವೆ ಏನಿಲ್ಲ… ಏನೇನಿಲ್ಲಾ….. ಎನ್ನುವ ರಿಯಲ್ ಸ್ಟಾರ್ ಉಪೇಂದ್ರರ ಹಾಡಿನಂತೆ ಚಿನ್ನಕಳ್ಳಿ ರನ್ಯಾ ಚಿನ್ನ ಕದ್ದು ಚಿನ್ನದ ಸಂಕೋಲೆಯಲ್ಲಿ ಬಂಧಿ ಯಾಗಿ, ಈ ಚಿನ್ನಕಳ್ಳಿ ಪ್ರಕರಣದ ಹಿಂದೆ ಪ್ರಭಾವೀ ಸಚಿವರ ಕೈವಾಡವಿದೆಯೆಂಬ ಮಾತುಗಳು ಕೇಳಿ ಬಂದಾಗೆಲ್ಲ ತನಗೇನು ಅರಿವಿಲ್ಲದವರಂತೆ ಹಾ೦, ಹೂಂ ಎಂದು ಉತ್ತರ ಕೊಡುತ್ತಲೇ ಸಾಚಗಳಂತೆ ಜಾರಿಕೊಳ್ಳುತ್ತಿದ್ದ ಹಾ೦, ಹೂಂ ಗೃಹ ಸಚಿವ ಪರಮೇಶ್ವರ್ ಅವರು ನಡೆಸುತ್ತಿದ್ದ ವಿದ್ಯಾಸಂಸ್ಥೆಗಳ ಮೇಲೆ ಏಕಾಏಕಿ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗಲಷ್ಟೇ ಈ ಹಾo ಹೂಂ ಸಚಿವರು ಚಿನ್ನ ಕಳ್ಳಿಯೊಂದಿಗೆ ನಂಟನ್ನು ಮಾತ್ರ ಹೊಂದಿದ್ದಲ್ಲ, ನಂಟಿನ ಜೊತೆ ಆಕೆಯ ಮೃದು ಕೈಗಳಿಗೆ ಇಡುಗಂಟನ್ನೂ ಇಕ್ಕಿದ್ದರೆಂಬ ಸತ್ಯ ಹೊರಪ್ರಪಂಚಕ್ಕೆ ಗೊತ್ತಾಗಿದ್ದು.

ಬಹುಕೋಟಿ ರೂಪಾಯಿ ಬೆಲೆಯ ಚಿನ್ನದ ಬಿಸ್ಕತ್ ಗಳನ್ನು ಚಾಲಾಕಿತನದಿಂದಲೇ ಸಾಗಾಟ ನಡೆಸುತ್ತಿದ್ದ ಚಾಲಾಕಿ ಚಿನ್ನ ಕಳ್ಳಿ ನಟಿ ರನ್ಯಾ ರಾವ್ ಕೊನೆಗೂ ಸಿಕ್ಕಿಬಿದ್ದ ಬೆನ್ನಲ್ಲೇ ಕಾಂಗ್ರೆಸ್ ನ ಪ್ರಭಾವಿ ಸಚಿವರು ತಾವು ಕುಳಿತಿದ್ದ ಎಸಿ ರೂಮ್ ಗಳಲ್ಲಿ ಕುಳಿತಲ್ಲೇ ಒಂದೇ ಸಮನೆ ಬೆದರಿ ಬೆವರತೊಡಗಿದ್ದರು. ಆದರೂ ಆಕೆಗೆ ಜಾಮೀನು ಸಿಕ್ಕಿಬಿಟ್ಟರಂತೂ ತಾವೆಲ್ಲರೂ ಸೇಫ್ ಆಗಬಹುದೆಂದೇ ಭಾವಿಸಿದ್ದ ರನ್ಯಾಳೊಂದಿಗೆ ನoಟನ್ನು ಇಟ್ಟುಕೊಂಡಿದ್ದವರೆಲ್ಲರೂ ತೆರೆಮರೆಯಲ್ಲೇ ನಿಂತು ರನ್ಯಾಳಿಗೆ ಜಾಮೀನು ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಇದರಂತೆ ಆಕೆಗೆ ಕೊನೆಗೂ ಕಳೆದೆರಡು ದಿನಗಳ ಹಿಂದೆಯಷ್ಟೇ ಜಾಮೀನು ಮಂಜೂರಾಗಿತ್ತು. ಆದರೂ ಕಾನೂನು ಪ್ರಕ್ರಿಯೆಗಳೆಲ್ಲವೂ ಮುಗಿಯದ ಕಾರಣ ಆಕೆ ಹೊರಬರದಂತಹಾ ಸ್ಥಿತಿ ಇದೆ ಎನ್ನಲಾಗಿದೆ.
ಇದರ ಮಧ್ಯೆಯೇ ಕರ್ನಾಟಕ ಕೈ ಸರ್ಕಾರದ ಹಾo, ಹೂಂ ಗೃಹ ಸಚಿವ ಪರಮೇಶ್ವರ್ ನಡೆಸುತ್ತಿರುವ ಹಲವು ವಿದ್ಯಾಸಂಸ್ಥೆಗಳಿಗೆ ಏಕಕಾಲದಲ್ಲಿ ಏಕಾಏಕಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿಗಳನ್ನೆಲ್ಲ ಪರಿಶೀಲನೆ ನಡೆಸಿದಾಗಲಷ್ಟೇ ಗೊತ್ತಾಗಿರುವುದು ಈ ಹಾo.. ಹೂಂ ಸಚಿವರ ಅಸಲೀ ಮುಖವಾಡ. ಈ ಗ್ಯಾರಂಟಿ ಸರ್ಕಾರದಲ್ಲಿ ಬೆದುರು ಗೊಂಬೆ, ರಬ್ಬರ್ ಸ್ಟಾಂಪ್ ಸಚಿವ ಹಾ೦, ಹೂಂ ಸಚಿವ ಎಂದೆಲ್ಲಾ ವಿರೋಧ ಪಕ್ಷಗಳಿಂದ ಕರೆಸಿಕೊಳ್ಳುತ್ತಿರುವ ಈ ಪರಮ್ ಮಾತ್ರ ನಂಟಿಲ್ಲ, ನಂಟಿಲ್ಲ ಎನ್ನುತ್ತಲೇ ಚಿನ್ನ ಕಳ್ಳಿ ರಮ್ಯಾಳೊಂದಿಗೆ ನಂಟಿನ ಜೊತೆಗೆ ಇಡುಗಂಟನ್ನೂ ಆಕೆಗೆ ಕೈಗಿತ್ತದ್ದಲ್ಲದೇ ಆಕೆಗೆ ದುಬಾರಿ ಬೆಲೆಯ ಗಿಫ್ಟನ್ನು ಸಹಾ ನೀಡಿ ಇದೀಗ ಇಡಿ ಅಧಿಕಾರಿಗಳ ಬ್ರಹ್ಮಗಂಟಿನೊಳಗೆ ಸಿಲುಕಿ ಹಾಕಿಕೊಂಡು ತಮ್ಮ ರಾಜಕೀಯ ಭವಿಷ್ಯಕ್ಕೇ ಸಂಚಕಾರ ತಂದ್ದೊಡ್ಡಿ ಕೊಂಡಿರುವುದು ವಿಪರ್ಯಾಸವೆನಿಸುತ್ತದೆ.
ತನಿಖಾ ನಿರತ ಇ.ಡಿ ಅಧಿಕಾರಿಗಳಿಗೆ ತಕ್ಷಣಕ್ಕೆ ಸಿಕ್ಕ ಮಾಹಿತಿ ಪ್ರಕಾರ ಪರಮೇಶ್ವರ್ ಚಿನ್ನ ಕಳ್ಳಿ ರನ್ಯಾಳ ಜೊತೆ ನಂಟನ್ನೂ ಹೊಂದಿ ಸುಮಾರು 40 ಲಕ್ಷಕ್ಕೂ ಅಧಿಕ ಅಕ್ರಮ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ನಡುವೆ ಈ ವಿಚಾರವನ್ನು ಸ್ವತಃ ಡಿಕೆಶಿಯೇ ಬಹಿರಂಗವಾಗಿ ಒಪ್ಪಿಕೊಂಡು ಬಹಿರಂಗವಾಗಿ ಹೇಳಿಕೆಯನ್ನೂ ಸಹಾ ನೀಡಿ, ಪರಮೇಶ್ವರ್ ರ ಮೇಲೆ ಒಂದೆಡೆ ಅನುಕಂಪವನ್ನು ತೋರಿಸಿದ ರೀತಿ ವರ್ತಿಸುತ್ತಾ ಇನ್ನೊಂದೆಡೆ ಅವರ ಮೇಲಿನ ಆರೋಪವನ್ನೂ ಜಗಜ್ಜಾಹೀರು ಗೊಳಿಸುವಂತೆ ಮಾತನಾಡುತ್ತಾ ಇರುವಂತಿದೆ. ಈ ಹಿಂದೆ ಪರಮೇಶ್ವರ್ ಡಿಕೆಶಿಯ ಅಧ್ಯಕ್ಷ ಪಟ್ಟ ತಪ್ಪಿಸಲು ನಡೆಸಿದ್ದ ಹಲವು ಪ್ರಯತ್ನಗಳಿಗೆ ಪ್ರತ್ಯುತ್ತರ ಕೊಡುವ ರೀತಿಯ ಅರ್ಥ ಬರುವ ರೀತಿಯಲ್ಲಿ ಹೇಳಿಕೆ ಕೊಡುವ ಮೂಲಕ ಡಿಕೆಶಿ ಲಾಜಿಕ್ ನಡೆಸುತ್ತಿರುವುದನ್ನು ನೋಡಿದರೆ ಪರಂ ಲಾಕ್ ಆದ ಹಿಂದೆ ಡಿಕೆಯ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆಯನ್ನು ಅಲ್ಲಗಳಿಯುಂತಿಲ್ಲ ಎನ್ನುವ ಮಾತುಗಳು ರಾಜಕೀಯ ವಲಯಗಳಿಂದ ಕೇಳಿ ಬರಲಾರಂಬಿಸಿವೆ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಬಿಜೆಪಿಯ ಪ್ರಹ್ಲಾದ್ ಜೋಶಿಯವರು ಮೊನ್ನೆ ಮಾತನಾಡುತ್ತಾ ಗೃಹ ಸಚಿವ ಪರಮ್ ರನ್ನು ಈ ರೀತಿ ಇಡಿಯ ಈಟಿಗೆ ಸಿಲುಕಿಸಿದ್ದು ಬೇರೆ ಯಾರೂ ಆಗಿರದೆ ಹಿಂದೆ ಪರಂ ಬಣ ಯಾರ ವಿರುದ್ಧ ತೆರೆ ಮರೆಯಲ್ಲಿ ಸಮರ ಸಾರುತ್ತಿತ್ತೋ ಅದೇ ಬಣ ಈಗ ಸದ್ದಿಲ್ಲದೆ ಪರoರನ್ನು ಈ ರೀತಿ ಇಡಿಯ ಈಟಿಯೊಳಗೆ ಸಿಲುಕಿಸಿ ತನ್ನ ಹಗೆ ಸಾಧಿಸಿ ಕೊಂಡಿದೆ ಎಂದು ಹೇಳಿರುವುದು ಕೂಡ ಗೃಹ ಸಚಿವ ಪರಮೇಶ್ವರ್ ರ ಶಿಕ್ಷಣ ಸಂಸ್ಥೆಗಳಿಗೆ ಇ.ಡಿ ದಾಳಿ ನಡೆಸಿರುವುದರ ಹಿಂದೆ ಡಿಕೆಯ ಕೈವಾಡ ಇದೆ ಎಂಬ ಆರೋಪಗಳಿಗೆ ಪುಷ್ಟಿ ನೀಡಿದಂತಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಚಿನ್ನ ಕಳ್ಳಿ ರನ್ಯಾಳ ನಂಟು, ಗಂಟು, ಇಡುಗಂಟುಗಳೆಲ್ಲ ಮುಂದೆ ಯಾವೆಲ್ಲ ಘಟಾನುಘಟಿಗಳ ಕುರ್ಚಿಯನ್ನು ಅಲುಗಾಡಿಸಲಿದೆಯೋ? ಅಥವಾ ಯಾರ್ಯಾರನ್ನೆಲ್ಲ ಅಧಿಕಾರದಿಂದ ಕಿತ್ತು ಹಾಕಲಿಕ್ಕಿದೆಯೋ? ಯಾರ್ಯಾರೆಲ್ಲ ಕಾಲರ್ ಪಟ್ಟಿ ಹಿಡಿದುಕೊಂಡು ಕಿತ್ತಾಡಿಕೊಳ್ಳಲಿದ್ದಾರೋ? ಎಂಬುದಕ್ಕೆಲ್ಲ ಕಾಲವೇ ಉತ್ತರಿಸಬೇಕಾಗಿದೆಯಷ್ಟೇ.
Comments are closed.