Home News Hassan Bride Marriage: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು ಪ್ರಕರಣ; ಪ್ರಿಯಕರನ ಜೊತೆ...

Hassan Bride Marriage: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು ಪ್ರಕರಣ; ಪ್ರಿಯಕರನ ಜೊತೆ ಮದುವೆ

Image Credit: News 18 Kannada

Hindu neighbor gifts plot of land

Hindu neighbour gifts land to Muslim journalist

Hassan Bride Marriage: ಹಾಸನದಲ್ಲಿ ನಿನ್ನೆ ವರ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ವಧು, ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹಠ ಹಿಡಿದು ಮದುವೆ ಮಂಟಪದಿಂದ ಹೊರ ನಡೆದ ಪ್ರಸಂಗ ನಡೆದಿತ್ತು. ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿತ್ತು.

ಹಾಸನದ ಬೂವನಹಳ್ಳಿ ಬಡಾವಣೆ ನಿವಾಸಿ, ಸ್ನಾತಕೋತ್ತರ ಪದವೀಧರೆ ಪಲ್ಲವಿ ಹಾಗೂ ಆಲೂರು ತಾಲೂಕಿನ ತಿಮ್ಮನಹಳ್ಳಿಯ ಜಿ.ತಿಮ್ಮನಹಳ್ಳಿಯ ನಿವಾಸಿ ಸರಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್‌ ಅವರ ಮದುವೆ 3ತಿಂಗಳ ಹಿಂದೆ ನಿಶ್ಚಯವಾಗಿತ್ತು. ಶುಕ್ರವಾರ ಮದುವೆ ನಡೆಯಲಿತ್ತು. ಆದರೆ ಮದುವೆಯನ್ನು ವಧು ನಿರಾಕರಿಸಿದಳು.

ಪಲ್ಲವಿ ಹಲವು ವರ್ಷಗಳಿಂದ ಗೊರೂರು ಸಮೀಪದ ಬನವಾಸೆ ಗ್ರಾಮದ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಮಂಟಪಕ್ಕೆ ಹೋದಾಗ ಪ್ರಿಯಕರನಿಂದ ದೂರವಾಣಿ ಕರೆ ಬಂದಿದೆ. ನಂತರ ಆಕೆ ನಾನು ಪ್ರಿಯಕರನನ್ನೇ ಮದುವೆ ಆಗುವೆ ಎಂದು ಹೇಳಿದ್ದರಿಂದ ಮದುವೆ ನಿಂತಿದೆ.

ರಘು ಜೊತೆ ಪಲ್ಲವಿ ಮದುವೆಯನ್ನು ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಗಣಪತಿ ದೇಗುಲದಲ್ಲಿ ಶುಕ್ರವಾರ ಸಂಜೆ ಪಲ್ಲವಿ ಮನೆಯವರು ಮಾಡಿದರು.

ವರ ವೇಣುಗೋಪಾಲ್‌ ಕುಟುಂಬದವರಿಗೆ ಪಲ್ಲವಿ ಕುಟುಂಬದವರು ಪೊಲೀಸರ ಸಮ್ಮುಖದಲ್ಲಿ ಪರಿಹಾರ ರೂಪವಾರಿ ರೂ.1.75 ಲಕ್ಷ ಖರ್ಚು ನೀಡಿದ್ದಾರೆ.