Sonu Nigam: ‘ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ’ – ಮತ್ತೆ ನಾಲಿಗೆ ಹರಿಬಿಟ್ಟ ಸೋನು ನಿಗಮ್

Share the Article

Sonu Nigam: ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಗಾಯಕ ಸೋನು ನಿಗಮ್ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ ಎಂದು ಹೇಳಿದ್ದಾರೆ.

ಹೌದು, ಸೋನು ನಿಗಮ್ ಹೆಸರಿನ ಖಾತೆಯಿಂದ ಈ ರೀತಿಯ ಪೋಸ್ಟ್ ಮಾಡಲಾಗಿದೆ. ಆದರೆ ಈ ಬಾರಿ ಸ್ವತಃ ಸೋನು ನಿಗಮ್‌ ಏನೂ ಹೇಳಿಲ್ಲ.. ಬದಲಾಗಿ ಅವರ ಹೆಸರಿನಲ್ಲರುವ ಎಕ್ಸ್ ಖಾತೆಯಲ್ಲಿ ಕನ್ನಡ ಸಿನಿಮಾ ಬಗ್ಗೆ ಪೋಸ್ಟ್‌ ಮಾಡಲಾಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಅಷ್ಟಕ್ಕೂ ಸೋನು ನಿಗಮ್ ಎಂಬ ಖಾತೆದಾರ ಬಿಹಾರ ಮೂಲದ ವಕೀಲನಾಗಿದ್ದು, ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ ಎಂದು ಬರೆದಿದ್ದಾರೆ.

ಎಕ್ಸ್ನ ಪೋಸ್ಟ್ನಲ್ಲಿ ‘ಸೂರ್ಯನನ್ನು ನೀವು ಕೇವಲ ಇನ್ನೊಬ್ಬ ಭಾಷಾ ಹೋರಾಟಗಾರರಾ ಎಂದು ಕೇಳಿದರು. ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಬೇಡಿ! ಕನ್ನಡ ಚಲನಚಿತ್ರ ತಾರೆಯರಿಗೆ ಈ ಮಾತನ್ನು ಹೇಳುವ ಧೈರ್ಯ ನಿಮಗಿದೆಯೇ ಮಿಸ್ಟರ್ @Tejasvi_Surya, ಅಥವಾ ನೀವು ಕೇವಲ ಬೇರೆ ಭಾಷಾ ಯೋಧ? “ಎಂದು ಅವರು ಬುಧವಾರ ಎಕ್ಸ್ ಬರೆದಿದ್ದಾರೆ.

ಇನ್ನು ಈ ಹಿಂದೆಯೇ ಗಾಯಕ ಸೋನು ನಿಗಮ್‌ ತಮ್ಮ ಹೆಸರಿನಲ್ಲಿ ಖಾತೆ ಹೊಂದಿರುವ ಸೋನು ನಿಗಮ್‌ ಸಿಂಗ್‌ ಕೆಲ ರಾಜಕಾರಣಿಗಳ ಕುರಿತು ತಮ್ಮ ಫೋಟೋ ಬಳಸಿ ಪೋಟ್ಟ್ ಹಾಕಿದಾಗಲೇ ಇದು ನನ್ನ ಖಾತೆಯಲ್ಲ.. ನನ್ನ ಹೆಸರು ಬಳಸಬೇಡಿ ಎಂದು ಕಿಡಿ ಕಾರಿದ್ದರು. ಇದೀಗ ಕನ್ನಡ ಸಿನಿಮಾ ಕುರಿತ ಪೋಸ್ಟ್‌ ವೈರಲ್‌ ಆಗಿದ್ದು ಮತ್ತೆ ಸೋನು ನಿಗಮ್‌ ಗೆ ತಲೆ ಬಿಸಿ ತಂದಿದೆ.

Comments are closed.