ಮತ್ತೊಮ್ಮೆ ಅಂತಾರಾಷ್ಟ್ರೀಯ ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಮೊರೆ ಹೋದ ಪಾಕ್

Islamabad: ಪಾಕಿಸ್ತಾನವು ಇದೀಗ ಆರ್ಥಿಕ ಸಂಕಷ್ಟಗಳಿಗೆ ಒಳಗಾಗಿದ್ದು, ಅದನ್ನು ಎದುರಿಸಲು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ 4.9 ಬಿಲಿಯನ್ ಡಾಲರ್ ಸಾಲ ಪಡೆಯಲು ಯೋಜಿಸುತ್ತಿರುವುದು ತಿಳಿದು ಬಂದಿದೆ. ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನಿಂದ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಿದ್ದು, ಮತ್ತೊಮ್ಮೆ ಪಾಕಿಸ್ತಾನ ಜಾಗತಿಕ ಬ್ಯಾಂಕ್‌ಗಳಿಗೆ ಭಾರೀ ಪ್ರಮಾಣದ ಸಾಲಕ್ಕಾಗ ಮನವಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಪಾಕಿಸ್ತಾನವು ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸುವುದು ಹಾಗೂ ಸಾಲ ಮರುಪಾವತಿ ಮಾಡುವ ಉದ್ದೇಶದಿಂದ, ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ 4.9 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆಯುವ ತೀರ್ಮಾನ ಮಾಡಿದೆ. ಜೊತೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ 500 ಮಿಲಿಯನ್ ಡಾಲರ್ ಸಾಲಕ್ಕೆ, ವಾಣಿಜ್ಯ ಗ್ಯಾರಂಟಿಯನ್ನು ಸಹ ಪಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ಈ ಹೆಚ್ಚುವರಿ ಹಣವು ಪಾಕಿಸ್ತಾನದ ಹೊರಗಿನ ಹಣಕಾಕಾಸಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದಂತೆ.
ಪಾಕಿಸ್ತಾನವು ಆರ್ಥಿಕತೆಯ ಗೆಲುವು ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, 2024-25ರ ಹಣಕಾಸು ವರ್ಷಕ್ಕೆ ಶೇ. 3.6ರಷ್ಟು ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದ್ದರೂ ಕೂಡ ಕೇವಲ ಶೇ. 2.68ರಷ್ಟು ಬೆಳವಣಿಗೆಯನ್ನು ಸಾಧಿಸಲು ಮಾತ್ರ ಸಾಧ್ಯವಾಗಿದೆ.ಇತ್ತೀಚಿಗೆ ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಈ ವಿಷಯ ಬಹಿರಂಗವಾಗಿರುತ್ತದೆ.
ಒಟ್ಟಾರೆಯಾಗಿ, ಪಾಕಿಸ್ತಾನವು ಆರ್ಥಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಾಲ ಮತ್ತು ಐಎಂಎಫ್ ಸಹಾಯವನ್ನು ಪಡೆಯಲು ಪಾಕ್ ಪ್ರಯತ್ನಿಸುತ್ತಿದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ವಿದೇಶಿ ವಿನಿಮಯ ಮೀಸಲುಗಳನ್ನು ಬಲಪಡಿಸಲು ಸರ್ಕಾರವು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ.
Comments are closed.