Belthangady: ಮೃತ ಆಕಾಂಕ್ಷ ಮೃತದೇಹ ಮನೆಗೆ ಆಗಮನ

Belthangady: ಪಂಜಾಬ್‌ನಲ್ಲಿ ಆತ್ಮಹತ್ಯೆಗೈದ ಆಕಾಂಕ್ಷ ಎಸ್.ನಾಯರ್ ಅವರ ಮೃತ ದೇಹವು ಇಂದು ಮೇ 21 ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಧರ್ಮಸ್ಥಳದಿಂದ ಬೊಳಿಯಾರ್‌ಗೆ ಬಂದಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಮೃತದೇಹವನ್ನು ತರಲಾಯಿತು. ಭಾರೀ ಮಳೆಯ ಕಾರಣ ಮನೆಗೆ ಸಾಗುವ ದಾರಿಯಲ್ಲಿ ಆಂಬುಲೆನ್ಸ್ ಮಣ್ಣಿನಲ್ಲಿ ಹೂತು ಹೋದ ಘಟನೆಯೂ ನಡೆದಿದೆ. ನಂತರ ಸ್ಥಳೀಯರು ಆಂಬುಲೆನ್ಸ್ ಟೈರನ್ನು ಮಣ್ಣಿನಿಂದ ಹೊರತೆಗೆಯಲು ಸಹಾಯ ಮಾಡಿದರು.
ಮನೆಗೆ ಬಂದ ಆಕಾಂಕ್ಷಾ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆದು ಅಂತ್ಯಕ್ರಿಯೆ ನಡೆಯಲಿದೆ.
Comments are closed.