Hospete : ಭಾರತೀಯರದ್ದು ಚುಟ್ ಪುಟ್ ಯುದ್ಧ – ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ!!

Hospete: ಪೆಹಾಲ್ಗಮ್ ದಾಳಿ ನಡೆದು ಭಾರತ ಅದಕ್ಕೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಾಗಿಂದಲೂ ಕಾಂಗ್ರೆಸ್ ಪಕ್ಷ ಈ ಅಪರೇಷನ್ ಸಿಂಧೂರ್ ಅನ್ನು ಪ್ರಶ್ನೆ ಮಾಡುತ್ತಾ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಮೋದಿ ಸರ್ಕಾರದ ಕುರಿತು ಹೇಳಿಕೆಗಳನ್ನು ನೀಡುತ್ತಾ ವಿವಾದವನ್ನು ತನ್ನ ಮೈ ಮೇಲೆ ಹೇಳಿದುಕೊಳ್ಳುತ್ತಲೇ ಇದೆ. ಇದೀಗ ಮತ್ತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಸೈನಿಕರ ಕಾರ್ಯಾಚರಣೆಯನ್ನು ಚುಟ್ ಪುಟ್ ಯುದ್ಧ ಎಂದು ಕರೆದು ವಿವಾದಕ್ಕೆ ಕಾರಣರಾಗಿದ್ದಾರೆ.

ಹೌದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡ ಕಾರಣ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಹಲ್ಗಾಮ್ ಉಗ್ರರ ದಾಳಿ ಹಾಗೂ ಪಹಲ್ಗಾಮ್ ಘಟನೆ ಪ್ರಸ್ತಾಪಿಸಿ, ಈಗೇನು ಹೆಚ್ಚು ಕಡಿಮೆ ಚುಟ್ ಪುಟ್ ಯುದ್ಧ ನಡೆದಿದೆ ಎಂದು ಬಿಟ್ರು.
ಮುಂದುವರೆದು ಮಾತಾಡಿದ ಅವರು, ನಮ್ಮ ಪಾಕಿಸ್ತಾನ ಅಂತ ಹೇಳಿದ್ರು. ಬಳಿಕ ನಾವೇನ್ ಈ ಘರ್ಷಣೆ ಮಾಡುತ್ತಿದ್ದೇವೆ. ಪಾಕಿಸ್ತಾನ ಕೆಲಸ ಅಂತೂ ಯಾವಾಗೂ ಬರೀ ನಮ್ಮ ದೇಶದ ಮೇಲೆ ಗೂಬೇ ಕೂರಿಸೋದು. ಅವರು ಶಕ್ತಿ ಹೀನರು, ಇಂದು ಚೀನಾದಿಂದ ಸಹಾಯ ತಗೊಂಡು ನಮ್ಮ ಮೇಲೆ ದಾಳಿ ಮಾಡೋ ಯತ್ನ ಮಾಡಿದ್ದಾರೆ ಅಂತ ಗರಂ ಆದ್ರು.
Comments are closed.