Puttur: ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ!

Puttur: ಪುತ್ತೂರು (Puttur) ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನ ಮೇರೆಗೆ ಪುತ್ತೂರು ತಾಲೂಕಿನ ಇಬ್ಬರು ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆಯಾಗಿದೆ.

ಕೆಯ್ಯರು ಗ್ರಾಮದ ಲೋಕನಾಥ ಪಕ್ಕಳ ಅವರಿಗೆ 95,611 ಹಾಗೂ ನೆಟ್ಟಣಿಗೆ ಮುಡೂರು ಗ್ರಾಮದ ಕರ್ನೂರು ನಿವಾಸಿ ನಾರಾಯಣ ರೈ ಅವರಿಗೆ 17,450 ಪರಿಹಾರ ಧನ ಮಂಜೂರಾಗಿರುತ್ತದೆ. ಶಾಸಕರು ತನ್ನ ಕಚೇರಿಯಲ್ಲಿ ಪರಿಹಾರದ ಚೆಕ್ ವಿತರಿಸಿದರು.
Comments are closed.