PF: ಇನ್ಮುಂದೆ ಪಿಎಫ್ ಹಣವನ್ನು ಯುಪಿಐನಲ್ಲೂ ಡ್ರಾ ಮಾಡಲು ಸಾಧ್ಯ!

Share the Article

PF: ನೌಕರರ ಭವಿಷ್ಯ ನಿಧಿ ಸಂಸ್ಥೆಯು ಡಿಜಿಟಲ್ ರೂಪಾಂತರದ ಅಡಿಯಲ್ಲಿ ಪಿಎಫ್ (PF)ಚಂದಾದಾರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.

ಇನ್ಮುಂದೆ ಪಿಎಫ್ ಹಣವನ್ನು ಯುಪಿಐ ಅಥವಾ ಎಟಿಎಂ ಮೂಲಕವೂ ಪಡೆಯಬಹುದಾಗಿದೆ. ಯುಪಿಐ ಮುಖೇನವೂ ಭವಿಷ್ಯದಲ್ಲಿ ಪಿಎಫ್ ಕ್ಲೈಮ್ ಮಾಡಬಹುದು. ಈ ಹೊಸ ವ್ಯವಸ್ಥೆ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭಿಸಿದೆ.

ಇನ್ಮುಂದೆ ಚಂದಾದಾರರಿಗೆ ಸಹಾಯವಾಗುವಂತೆ ಈ ಹೊಸ ಅನುಕೂಲತೆಯನ್ನು ಕಲ್ಪಿಸಲಾಗುತ್ತಿದೆ. ಚಂದಾದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಹೇಳಿದ್ದಾರೆ.

Comments are closed.