Heart Attack: ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 29 ವರ್ಷದ ಸಿಎ ಹೃದಯಾಘಾತದಿಂದ ಸಾವು

Heart Attack: ಇಂದೋರ್‌ನಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪುಣೆಯ 29 ವರ್ಷಚ ಚಾರ್ಟರ್ಡ್ ಅಕೌಂಟೆಂಟ್ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಸಿಎಟಿ ರಸ್ತೆಯಲ್ಲಿರುವ ಮದುವೆ ಗಾರ್ಡನ್‌ನಲ್ಲಿ ಈ ಘಟನೆ ನಡೆದಿದೆ. ಸಂಭ್ರಮಾಚಾರಣೆಯ ಸಂದರ್ಭ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ.

ಮೃತಪಟ್ಟ ಯುವಕ ಪುಣೆಯ ಸಂಪತ್‌ಹಿಲ್ಸ್‌ನ ನಿವಾಸಿ ಆಯುಷ್ ವ್ಯಾಸ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ ಆಯುಷ್ ಶನಿವಾರ ಸಂಜೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ನಂತರ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಾಗ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅಪರೂಪದ ವಿಷಯ ಬೆಳಕಿಗೆ ಬಂದಿದೆ. ಹೃದಯದ ಅಪಧಮನಿಗಳು ಅಸಾಮಾನ್ಯವಾಗಿ ಗಟ್ಟಿಯಾಗಿದ್ದವು ಎಂದು ಹೇಳಲಾಗಿದೆ. ಇದು ಯುವ ವಯಸ್ಸಿನವರಲ್ಲಿ ಬಹಳ ವಿರಳ ಎನ್ನಲಾಗಿದೆ.
Comments are closed.