Home News Mangaluru: ಆಕಾಂಕ್ಷ ಸಾವು ಪ್ರಕರಣ ಇನ್ನೂ ಕಗ್ಗಂಟು: ಪಂಜಾಬ್‌ ಸಿಎಂಗೆ ಪತ್ರ ಬರೆದ ಪೋಷಕರು

Mangaluru: ಆಕಾಂಕ್ಷ ಸಾವು ಪ್ರಕರಣ ಇನ್ನೂ ಕಗ್ಗಂಟು: ಪಂಜಾಬ್‌ ಸಿಎಂಗೆ ಪತ್ರ ಬರೆದ ಪೋಷಕರು

Hindu neighbor gifts plot of land

Hindu neighbour gifts land to Muslim journalist

Mangalore: ಪಂಜಾಬ್‌ನಲ್ಲಿ ಧರ್ಮಸ್ಥಳದ ಆಕಾಂಕ್ಷ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿರುವುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ ಆಕಾಂಕ್ಷ ಸಾವಿನಲ್ಲಿ ಸಾಕಷ್ಟು ಅನುಮಾನಗಳು ಮೂಡಿದೆ. ಈ ಕಾರಣದಿಂದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಮೃತ ಆಕಾಂಕ್ಷ ಪೋಷಕರು ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಸರಕಾರ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಎಲ್‌ಪಿಸಿ ಕ್ಯಾಂಪಸ್‌ನಲ್ಲಿ ಈ ರೀತಿಯ ಹಲವು ಅಸಹಜ ಸಾವುಗಳು ಆಗಿದೆ. ಕಾಲೇಜಿನ ಕೈವಾಡ ಇದರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಸರಿಯಾದ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬರುತ್ತದೆ ಎಂದು ಪಂಜಾಬ್‌ ಸಿಎಂಗೆ ಪತ್ರ ಬರೆದಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರೊಫೆಸರ್‌ ವಿರುದ್ಧ ಎಫ್‌ಐಆರ್‌ ಹಾಕಲು ಪೊಲೀಸರು ಹಿಂದೇಟು ಹಾಕಿದ ಆರೋಪ ಕೇಳಿ ಬಂದಿದೆ. ಇದರಿಂದ ಹಿರಿಯ ಪೊಳಿಸ್‌ ಅಧಿಕಾರಿಗಳಿಗೆ ಆಕಾಂಕ್ಷ ಪೋಷಕರು ದೂರನ್ನು ನೀಡಿದ್ದಾರೆ. ಘಟನೆಯನ್ನು ವಿವರಿಸಿ ಆಕಾಂಕ್ಷ ಪೋಷಕರನ್ನು ಜಲಂಧರ್‌ನ ಡಿಐಜಿ ನವೀನ್‌ ಸಿಂಗ್ಲಾ ಮತ್ತು ಎಸ್‌ಪಿ ರೂರೇಂಧರ್‌ ಭಾಟ್ಟಿ ಕೌರ್‌ ಭೇಟಿ ಮಾಡಿದ್ದಾರೆ. ಕಾಲೇಜಿನ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಪೋಷಕರು ಆಗ್ರಹ ಮಾಡಿದ್ದಾರೆ. ಆದರೆ ಈ ರೀತಿ ಮಾಡಲು ಆಗಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹಾಗಾಗಿ ಆಕಾಂಕ್ಷ ಸಾವಿನ ಕುರಿತು ಇನ್ನೂ ಅನುಮಾನ ಉಂಟಾಗಿದೆ.