Home News Tirupati : ತಿರುಪತಿ ದೇವಸ್ಥಾನಕ್ಕೆ 50 ಕೆಜಿ ತೂಕದ ಎರಡು ಬೆಳ್ಳಿ ದೀಪ ನೀಡಿದ ಪ್ರಮೋದಾ...

Tirupati : ತಿರುಪತಿ ದೇವಸ್ಥಾನಕ್ಕೆ 50 ಕೆಜಿ ತೂಕದ ಎರಡು ಬೆಳ್ಳಿ ದೀಪ ನೀಡಿದ ಪ್ರಮೋದಾ ದೇವಿ ಒಡೆಯರ್

Hindu neighbor gifts plot of land

Hindu neighbour gifts land to Muslim journalist

Tirupati : ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ತಿರುಪತಿ ದೇವಸ್ಥಾನಕ್ಕೆ 50 ಕೆಜಿ ತೂಕದ ಎರಡು ಬೆಳ್ಳಿ ದೀಪಗಳನ್ನು ದೇಣಿಗೆ ನೀಡಿದ್ದಾರೆ.

ಹೌದು, ಪ್ರಮೋದಾ ದೇವಿ ಒಡೆಯರ್ ಅವರು ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ಹೆಚ್ಚುವರಿ ಇಒ ಸಿ.ಎಚ್. ​​ವೆಂಕಯ್ಯ ಚೌಧರಿ ಮತ್ತು ಟಿಟಿಡಿ ಮಂಡಳಿ ಸದಸ್ಯ ನರೇಶ್ ಅವರಿಗೆ ಅರ್ಪಿಸಿದರು.

ಅಂದಹಾಗೆ ಮೈಸೂರು ರಾಜಮನೆತನದವರು ತಿರುಮಲ ದೇವರನ್ನು ಪೂಜಿಸುತ್ತಾರೆ. ಸುಮಾರು 300 ವರ್ಷಗಳ ಹಿಂದೆ, ಅಂದಿನ ಮೈಸೂರು ಮಹಾರಾಜರು ತಿರುಮಲ ದೇವಸ್ಥಾನಕ್ಕೆ ಬೆಳ್ಳಿ ಅಖಂಡ ದೀಪಗಳನ್ನು ದಾನ ಮಾಡಿದ್ದರು. ಇದೀಗ ಮೈಸೂರು ರಾಜಮಾತೆ ಪ್ರಮೋದಾ ದೇವಿ ಅವರು ಮೈಸೂರು ಸಂಸ್ಥಾನದ ಪರವಾಗಿ ತಿರುಮಲ ಶ್ರೀಗಳಿಗೆ ಎರಡು ಬೃಹತ್ ಬೆಳ್ಳಿಯ ಅಖಂಡ ದೀಪಗಳನ್ನು ಅರ್ಪಿಸಿದರು.

ಪ್ರತಿ ಬೆಳ್ಳಿ ಅಖಂಡ ದೀಪವು ಸರಿಸುಮಾರು 50 ಕೆಜಿ ತೂಗುತ್ತದೆ. ಇವುಗಳನ್ನು ಶ್ರೀವಾರಿಯ ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತದೆ.