Karkala: ಅಕ್ರಮ ಮರಳು ಸಾಗಾಟ ಪ್ರಕರಣ: ಎರಡು ವಾಹನಗಳು ಸಹಿತ ಅಕ್ರಮ ಮರಳು ವಶ!

Karkala: ಯಾವುದೇ ಪರವಾನಿಗೆ ಇಲ್ಲದೇ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳು ಹಾಗೂ 3 ಯೂನಿಟ್ ಕಾರ್ಕಳ (Karkala) ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಮಾಂಜ ಎಂಬಲ್ಲಿ ಹೊಳೆಯಲ್ಲಿ ಟಾಟಾ 407 ವಾಹನ ಚಾಲಕ ಸಯ್ಯದ್ ಜಲೀಲ್ ಎಂಬಾತ ಮರಳು ತೆಗೆದು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಾಹನ ಸಹಿತ ಮರಳು ವಶಕ್ಕೆ ಪಡೆದರೆ, ಜೊತೆಗೆ ಕಾಂತಾವರ ಗ್ರಾಮದ ಪರಪ್ಪಾಡಿ ಎಂಬಲ್ಲಿ ಟಿಪ್ಪರ್ ಚಾಲಕ ಶೇಖ್ ಶಾಹಿದ್ ಎಂಬಾತ ಮಂಗಳೂರಿನಿಂದ ಯಾವುದೇ ಪರವಾನಗಿ ಇಲ್ಲದೇ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದಾಗ ಟಿಪ್ಪರ್ ಸಹಿತ ಮರಳನ್ನು ವಶಕ್ಕೆ ಪಡೆದಿದ್ದಾರೆ.
Comments are closed.