Belthangdy: ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಸಾವು ಪ್ರಕರಣ; ಆಕಾಂಕ್ಷ ಸಾವಿನ ರಹಸ್ಯ ಮಾಹಿತಿ ಇಲ್ಲಿದೆ

Share the Article

Belthangdy: ಪಂಜಾಬ್‌ನಲ್ಲಿ ಧರ್ಮಸ್ಥಳದ ಯುವತಿ ಏರೋಸ್ಪೇಸ್‌ ಇಂಜಿನಿಯರ್‌ ಆಕಾಂಕ್ಷ ಎಸ್‌ ನಾಯರ್‌ (22) ನಿಗೂಢ ಸಾವು ಪ್ರಕರಣಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದು ಬಂದಿದೆ.

ಪಂಜಾಬ್‌ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್‌ಪಿಯು ಮೆಂಟರ್‌ ಪ್ರೊಫೆಸರ್‌ ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ (45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಆಕಾಂಕ್ಷಗಳಿಂದ ಬಿಜಿಲ್‌ ಮ್ಯಾಥ್ಯೂ ಕೆಲವೊಂದು ಕಾರಣದಿಂದ ದೂರಸರಿದಿದ್ದು, ಬ್ರೇಕಪ್‌ ಮಾಡಿಕೊಂಡಿದ್ದ. ಮೇ 16 ರಂದು ಡೆಲ್ಲಿಯಿಂದ ಪಂಜಾಬ್‌ನ ಪಾಗ್ವಡಕ್ಕೆ ಬಂದ ಆಕಾಂಕ್ಷ, ಆತನ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳಿಬ್ಬರನ್ನು ಬಿಟ್ಟು ನನ್ನ ಜೊತೆ ಬಂದು ಮದುವೆಯಾಗಬೇಕೆಂದು ಹೇಳಿದ್ದಳು.

ಆದರೆ ಇದಕ್ಕೆ ಮ್ಯಾಥ್ಯೂ ಒಪ್ಪಲಿಲ್ಲ. ನೊಂದ ಆಕಾಂಕ್ಷ ಮೇ 17 ರಂದು ಬೆಳಗ್ಗೆ 11 ಗಂಟೆಗೆ ಕೇರಳ ಮೂಲದ ಸ್ನೇಹಿತರ ಜೊತೆ ಬೈಕ್‌ ಮೂಲಕ ಆಕಾಂಕ್ಷ ಕಾಲೇಜಿಗೆ ಹೋಗಿದ್ದು ಅಲ್ಲಿ ಮ್ಯಾಥ್ಯೂಗೆ ನಾನು ಸಾಯುತ್ತೇನೆ ಎಂದು ಮೆಸೇಜ್‌ ಮಾಡಿ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿದ್ದಾಳೆ. ನಂತರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪಂಜಾಬ್‌ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಜಲಂದರ್‌ ಪೊಲೀಸ್‌ ಠಾಣೆಯಲ್ಲಿ ಮೃತಪಟ್ಟ ಆಕಾಂಕ್ಷ ಸಹೋದರ ಆಕಾಶ್‌ ನಾಯರ್‌ ಮೇ 18 ರಂದು ಸಂಜೆ ಎಲ್‌ಪಿಯು ಕಾಲೇಜಿನ ಪ್ರೊಫೆಸರ್‌ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ (45) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ನಾನು ಡೆಲ್ಲಿಯಿಂದ ಎಲ್‌ಪಿಯು ಕಾಲೇಜಿಗೆ ಸರ್ಟಿಫಿಕೇಟ್‌ ತರಲು ಹೋಗುತ್ತಿರುವುದಾಗಿ ಹೇಳಿ ತಾಯಿಯಿಂದ 2 ಸಾವಿರ ಹಣ ಬೇಕೆಂದು ಗೂಗಲ್‌ ಪೇ ಮಾಡಿಸಿದ್ದಳು. ನಂತರ ಕರೆ ಸ್ವೀಕರಿಸದೆ ಮೆಸೇಜ್‌ ಮಾಡಿ ಕಾಲೇಜಿನಲ್ಲಿರುವುದಾಗಿ ಹೇಳಿ ನಂತರ ಆತ್ಮಹತ್ಯೆ ವಿಷಯ ಮನೆ ಮಂದಿಗೆ ಪೊಲೀಸರ ಮೂಲಕ ತಿಳಿದಿದೆ.

ಆಕಾಂಕ್ಷ ತನ್ನ ಸಾವಿಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಮೇ 17 ರಂದು ವಾಟ್ಸಪ್‌ನಲ್ಲಿ ಪ್ರೊಫೆಸರ್‌ ಬಿಜಿಲ್‌ ಮ್ಯಾಥ್ಯೂಗೆ ಕಳುಹಿಸಿದ ಡೆತ್‌ನೋಟ್‌ ಪತ್ತೆಯಾಗಿದ್ದು ಈ ಕುರಿತು ಪೊಲೀಸರು ತನಿಖೆ ಮಾಡುತ್ತಿರುವುದಾಗಿ ವರದಿಯಾಗಿದೆ.

Comments are closed.