Karkala: ಕೆದಿಂಜೆಯಲ್ಲಿ ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ: ನಗದು ಸಹಿತ ಇಬ್ಬರು ವಶಕ್ಕೆ!

Karkala: ಬೋಳ ಗ್ರಾಮದ ಕೆದಿಂಜೆ ದೀಪಕ್ ಹೊಟೇಲ್ ಬಳಿ ಮಟ್ಕಾ ಚೀಟಿ ಬರೆದು ಹಣ ಸಂಗ್ರಹಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಕಳ (Karkala) ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಎಂ.ಎಸ್ ಅವರ ತಂಡ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ನಗದು ಸೀಜ್ ಮಾಡಿದ್ದಾರೆ.

ಶನಿವಾರ ಬೆಳಗ್ಗೆ 10:30ರ ಸುಮಾರಿಗೆ
ದೀಪಕ್ ಹೋಟೆಲ್ ಪಕ್ಕದ ಶೆಡ್‌ನಲ್ಲಿ
ಆರೋಪಿಗಳಾದ ಪ್ರವೀಣ್ ಮತ್ತು
ಅಭಿಷೇಕ್ ಮಟ್ಕಾ ಹಣ ಸಂಗ್ರಹಿಸುತ್ತಿದ್ದಾಗಲೇ ಪೊಲೀಸರ
ಬಲೆಗೆ ಬಿದ್ದಿದ್ದಾರೆ.
ಬಂಧಿತರಿಂದ ಪೇಪರ್ ಹಾಳೆಗಳು, ಪೆನ್ 1,882 ರೂ ನಗದು ಟೇಬಲ್, ಕುರ್ಚಿ ಮತ್ತು ಶೆಡ್ ನಿರ್ಮಿಸಲು ಬಳಸಿದ ತಗಡು ಶೀಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.