Accident: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಲಾರಿ..!

Accident: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ವರಾಹಿ ಹಿನ್ನೀರಿಗೆ ಬಿದ್ದು, ಮುಳುಗಿ ಹೋದ ಘಟನೆ ಹೊಸನಗರ ತಾಲೂಕಿನ ಹುಲಿಕಲ್‌ನಲ್ಲಿ ನಡೆದಿದೆ.

ಮೇ 17 ರಂದು ರಾತ್ರಿ ರಾತ್ರಿ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಜೋಳ ತುಂಬಿಸಿಕೊಂಡು ಲಾರಿ ತೆರಳುತ್ತಿತ್ತು. ಹುಲಿಕಲ್ ಘಾಟಿ ಬಳಿ ಬಂದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ವರಾಹಿ ನದಿಗೆ ಬಿದ್ದಿದೆ. ಚಾಲಕ ಇಬ್ರಾಹಿಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾಲಕ ನಿದ್ರೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.