Kodagu: ಬಿದ್ದುಸಿಕ್ಕಿದ ಚಿನ್ನದ ವಾಚನ್ನು ಹಿಂತಿರುಗಿಸಿದ ಎ.ಎಸ್.ಐ.!

Kodagu: ತಲಕಾವೇರಿ ದೇವಾಲಯದ ಆವರಣದಲ್ಲಿ ಬಿದ್ದು ಸಿಕ್ಕಿದ ರೂ. 5 ಲಕ್ಷ ಬೆಲೆಬಾಳುವ ಚಿನ್ನದ ವಾಚ್ ಅನ್ನು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಭಾಗಮಂಡಲ ಪೊಲೀಸ್ ಠಾಣೆಯ ಎ.ಎಸ್.ಐ. ಆಗಿರುವ ಎಂ.ಬಿ. ಪೆಮ್ಮಯ್ಯ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಚೆನ್ನೈ ಮೂಲದ ಜಯ ಪಾರ್ವತಿ ಎಂಬುವವರು ಈ ವಾಚ್ ಅನ್ನು ಕಳೆದುಕೊಂಡಿದ್ದರು. ಎ.ಎಸ್.ಐ. ಪೆಮ್ಮಯ್ಯ ಅವರ ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿರುವ
ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.
Comments are closed.