Udupi : ಬುರ್ಖಾಧಾರಿ ಮಹಿಳೆಯರಿಂದ ಮಕ್ಕಳ ಕಳ್ಳತನಕ್ಕೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿದು ಪರಾರಿ

Udupi : ಉಡುಪಿಯ ಬೆಳಪು ಗ್ರಾಮದ ಜನತಾ ಕಾಲೋನಿಯಲ್ಲಿ ಮನೆಗೆ ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೋಣೆಯಲ್ಲಿ ಮಲಗಿದ್ದ ಮಗುವನ್ನು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.

ಹೌದು, ಮೊಹಮ್ಮದಾಲಿ ಎಂಬವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದು, ಅದರಲ್ಲಿ ಇನ್ನೊಬ್ಬಳು ಮಹಿಳೆ ಮನೆಯ ಒಳಗೆ ಹೋಗಿ ತೊಟ್ಟಿಲಲ್ಲಿ ಮಲಗಿದ್ದ ಮುಹಮ್ಮದಾಲಿಯ ತಮ್ಮನ ಮಗುವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣ ಮಹಿಳೆಯನ್ನು ಮಗುವಿನ ತಾಯಿ ತಾಬರಿಸ್ ತಡೆದಿದ್ದಾರೆ. ಈ ವೇಳೆ ಮಗುವನ್ನು ಬಿಟ್ಟು, ತಾಬರಿಸ್‍ಗೆ ಮಹಿಳೆಯರು ಚಾಕು ಇರಿದು ಪರಾರಿಯಾಗಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಧರಿಸಿದ್ದ ಬುರ್ಖಾ ಬೆಳಪು ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ.
Comments are closed.