Home News SSLC: ಮೊಮ್ಮಗನ ಜೊತೆ ತಾನೂ SSLC ಪರೀಕ್ಷೆ ಬರೆದ 65 ರ ಅಜ್ಜಿ

SSLC: ಮೊಮ್ಮಗನ ಜೊತೆ ತಾನೂ SSLC ಪರೀಕ್ಷೆ ಬರೆದ 65 ರ ಅಜ್ಜಿ

Hindu neighbor gifts plot of land

Hindu neighbour gifts land to Muslim journalist

SSLC: ಇತ್ತೀಚಿಗಷ್ಟೇ ನಡೆದ ನೀಟ್ ಪರೀಕ್ಷೆಯ ಸಂದರ್ಭ 70ರ ಪ್ರಾಯದ ಅಜ್ಜಿ ಒಬ್ಬರು ಪರೀಕ್ಷೆ ಬರೆದು ದೇಶಾದ್ಯಂತ ಸುದ್ದಿಯಾಗಿದ್ದರು. ಇದೀಗ ಇದರ ನಡುವೆಯೇ ಮೊಮ್ಮಗನ ಜೊತೆ ತಾನು ಹೋಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು 65ರ ಅಜ್ಜಿ ಒಬ್ಬರು ಫೇಮಸ್ ಆಗಿದ್ದಾರೆ.

ಮುಂಬೈನ ಪ್ರಭಾವತಿ(65) ಎಂಬ ಮಹಿಳೆ 10 ನೇ ತರಗತಿ ಪರೀಕ್ಷೆ ಬರೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಮಾತ್ರವಲ್ಲದೆ ಅವರು ಪರೀಕ್ಷೆಯಲ್ಲಿ ಶೇಕಡಾ 52 ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾವತಿ ‘ನಾನು ಮತ್ತು ನನ್ನ ಮೊಮ್ಮಗ ಇಬ್ಬರೂ 10 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ ಎಂದು ನನಗೆ ಸಂತೋಷವಾಗಿದೆ. ನಾನು ಪರೀಕ್ಷೆ ಬರೆಯಲು ಹೋದಾಗ, ಅಲ್ಲಿದ್ದ ಎಲ್ಲರೂ ತುಂಬಾ ಸಂತೋಷಪಟ್ಟರು. ಎಲ್ಲರೂ ನನ್ನನ್ನು ಗೌರವಿಸುತ್ತಿದ್ದರು. ನನ್ನ ಶಿಕ್ಷಕರು ತುಂಬಾ ಒಳ್ಳೆಯವರಾಗಿದ್ದರು. ನನ್ನ ಕುಟುಂಬದಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ.’ ಎಂದು ಹೇಳಿದ್ದಾರೆ.