Bengaluru : ಹೋಟೆಲ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಟ್ಟದಾಗಿ ನಿಂದಿಸಿದ ಓನರ್ !!

Bengaluru : ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಭಾರತದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಗಿದೆ. ಆದರೆ ಇದೀಗ ಈ ಬೆನ್ನಲ್ಲೇ ಮತ್ತೊಂದು ಕನ್ನಡಿಗರಿಗೆ ಅಪಮಾನ ಮಾಡಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ನಾಲಾಯಕ್ ಹೋಟೆಲ್ ಓನರ್, ತನ್ನ ಹೋಟೆಲ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಟ್ಟದಾಗಿ ನಿಂದಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಇವರ ಮೇಲೆ ಕೇಸ್ ಆಗಲೇಬೇಕು @BlrCityPolice
ಇದು ಬೇಕಂತಲೇ ಮಾಡಿದ್ದಾರೆ.
ಪದೇ ಪದೇ ಕನ್ನಡಿಗರನ್ನು ಕೆಣಕೋ ಕೆಲಸ ಆಗ್ತಿದೆ ಈ ಹಿಂದಿವಾಲಾಗಳಿಂದ
ಈ ಬಾರಿ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿದ್ದಾರೆ.
ವಿಡಿಯೋ ರೆಕಾರ್ಡ್ ಆಗಿರೋದು :
ಏಪ್ರಿಲ್ 16, ಶುಕ್ರವಾರ ರಾತ್ರಿ
ಸ್ಥಳ :Hotel GS SUITES, ಕೋರಮಂಗಲ, ಬೆಂಗಳೂರು. pic.twitter.com/FgxDstz1gg— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 17, 2025
ಹೌದು, ಬೆಂಗಳೂರಿನ ಕೋರಮಂಗಲದಲ್ಲಿನ ಹೊಟೇಲ್ ಜಿಎಸ್ ಸೂಟ್ಸ್ನ ಎಲ್ಇಡಿ ಡಿಸ್ಪ್ಲೇನಲ್ಲಿ ಕನ್ನಡಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನ್ನೆ ( ಮೇ 16 ) ಈ ಘಟನೆ ನಡೆದಿದ್ದು, ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಈ ಸುದ್ದಿ ತಿಳಿದ ಕೂಡಲೇ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಬೋರ್ಡ್ ಮೇಲೆ “KANNAGIDA M***” ಎಂದು ಬರೆಯಲಾಗಿದ್ದು, ಇದು ಅತಿರೇಕದ ವರ್ತನೆಯಂತೆ ಕಂಡಿದೆ. ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೋರ್ಡ್ನಲ್ಲಿ ಬೇಕಂತಲೇ ಈ ರೀತಿ ಬರೆದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.
Comments are closed.