Sakleshpur-Subramanya Road: ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ರೈಲ್ವೇ ವಿದ್ಯುದ್ದೀಕರಣ ಕಾಮಗಾರಿ: 5 ತಿಂಗಳು ಬೆಂಗಳೂರು-ಮಂಗಳೂರಿನ ರೈಲುಗಳು ರದ್ದು

Sakleshpur-Subramanya Road: ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯುವುದರಿಂದ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಜೂನ್ 1 ರಿಂದ ನವೆಂಬರ್ 1 ರವರೆಗೆ ಈ ಕೆಲಸ ನಡೆಯಲಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

Kindly note the Cancellation of train services due to line block for safety-related and Railway Electrification work between Sakleshpur – Subrahmanya Road section.
ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣದಿಂದಾಗಿ ಕೆಲವು… pic.twitter.com/4j1BogWwKq— South Western Railway (@SWRRLY) May 16, 2025
ಮೇ 31 ರಿಂದ ನವೆಂಬರ್ 1 ರವರೆಗೆ ಪ್ರತಿ ಶನಿವಾರದಂದು ಸಂಚರಿಸುವ ಯಶವಂತಪುರ ಟು ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16539) ರದ್ದಾಗಲಿದೆ.
ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರದಂದು ಸಂಚರಿಸುವ ಮಂಗಳೂರು ಜಂಕ್ಷನ್ ಟು ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16540) ಸಹ ರದ್ದಾಗಲಿದೆ.
ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಸಂಚರಿಸುವ ಯಶವಂತಪುರ ಟು ಮಂಗಳೂರು ಜಂಕ್ಷನ್ ಟ್ರೈನ್-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16575) ರದ್ದಾಗಲಿದೆ.
ಜೂನ್ 2ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಮಂಗಳೂರು ಟು ಯಶವಂತಪುರ ಟಿ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ಸಹ ರದ್ಧಾಗಲಿದೆ.
ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಯಶವಂತಪುರ ಟು ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16515) , ಜೂನ್ 3ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸುವ ಕಾರವಾರ ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ಸಹ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ತಿಳಿಸಿದೆ.
Comments are closed.