UP: ಸೋಶಿಯಲ್ ಮೀಡಿಯಾ ನೋಡಿಕೊಂಡು ಕೂದಲು ಕಸಿ – ಇಬ್ಬರು ಇಂಜಿನಿಯರ್ ಸಾವು

UP: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕ್ಲಿನಿಕ್ ಒಂದನ್ನು ಹುಡುಕಿಕೊಂಡು ಹೋಗಿ ಕೂದಲು ಕಸಿ ಮಾಡಿಸಿಕೊಂಡ ಇಬ್ಬರು ಇಂಜಿನಿಯರ್ ಗಳು ಸಾವನ್ನಪ್ಪಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

ಹೌದು, ಉತ್ತರ ಪ್ರದೇಶದ ಇಬ್ಬರು ಯುವಕರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿಕೊಂಡು ಕೂದಲಿನ ಕಸಿಗಾಗಿ ಕಾನ್ಪುರರ ಖಾಸಗಿ ಕ್ಲಿನಿಕ್‌ಗೆ ಹೋಗಿ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. ಕೂದಲು ಕಸಿ ಮಾಡಿದ ನಂತರ ನೋವು, ಊತ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೊನೆಗೆ ಅವರು ಉರಿ, ಉರಿ ಎನ್ನುತ್ತಲೇ ಸಾವನ್ನಪ್ಪಿದ್ದಾರೆ. ಈಗ ಎರಡು ಕುಟುಂಬಗಳು ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿವೆ.
ಮೊದಲ ಪ್ರಕರಣ :
ಸೋಶಿಯಲ್ ಮೀಡಿಯಾದಲ್ಲಿ ಕೂದಲು ಕಸಿ ಮಾಡುವ ಕ್ಲಿನಿಕ್ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿ ರ್ಉತ್ತರ ಪ್ರದೇಶದ ಇಂಜಿನಿಯರ್ ಮಯಾಂಕ್ ಕಟಾರಿಯಾ ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿದ್ದಾರೆ. 2023 ನವೆಂಬರ್ 18 ರಂದು ಕೂದಲು ಕಸಿ ಮಾಡಿಸಿಕೊಂಡರು. ಶಸ್ತ್ರಚಿಕಿತ್ಸೆಯ ಕೆಲವು ಗಂಟೆಗಳ ನಂತರ, ಮಯಾಂಕ್‌ಗೆ ತೀವ್ರ ನೋವು ಮತ್ತು ಊತ ಕಾಣಿಸಿಕೊಂಡಿತು. ಪರಿಸ್ಥಿತಿ ಹದಗೆಟ್ಟು ಮರುದಿನ ಅಂದರೆ ನವೆಂಬರ್ 19 ರಂದು ನಿಧನರಾದರು.
ಎರಡನೇ ಪ್ರಕರಣ :
ಅದೇ ಕ್ಲಿನಿಕ್‌ನಲ್ಲಿ ವಿನೀತ್ ದುಬೆ ಎಂಬ ಇನ್ನೊಬ್ಬ ಇಂಜಿನಿಯರ್ ಮಾರ್ಚ್ 14 ರಂದು ಕೂದಲು ಕಸಿ ಮಾಡಿಸಿಕೊಂಡರು. ಆದರೆ ಸ್ವಲ್ಪ ಸಮಯದ ನಂತರ ಅವರು ಸಹ ಸಾವನ್ನಪ್ಪಿದರು. ವಿನೀತ್ ಪತ್ನಿ ಜಯಾ ದುಬೆ ಈ ಬಗ್ಗೆ ಕಾನ್ಪುರ ಪೊಲೀಸರಿಗೆ ದೂರು ನೀಡಿದರು.
Comments are closed.