Chaitra Kundapura : ‘ನಮ್ಮಪ್ಪ ಕುಡುಕ’ ಎಂದ ಚೈತ್ರಾ ಕುಂದಾಪುರ – ರಕ್ತಪರೀಕ್ಷೆ ಮಾಡಿ ಚೆಕ್ ಮಾಡಿ ಎಂದ ತಂದೆ

Chaitra Kundapura : ಹಿಂದೂ ಫೈಯರ್ ಬ್ರಾಂಡ್ ಆದ ಚೈತ್ರ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯಕ ಅವರು ದಿಡೀರ್ ಎಂದು ಪ್ರತ್ಯಕ್ಷ ಆಗಿ ಮಗಳು ಚೈತ್ರ ಕುಂದಾಪುರ ಹಾಗೂ ಹೆಂಡತಿ ರೋಹಿಣಿಯವರ ಕುರಿತು ಆರೋಪಗಳ ಸುರಿಮಳೆ ಮಾಡಿದ್ದಾರೆ.

ತಂದೆಯ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚೈತ್ರ ಕುಂದಾಪುರ ಅವರು ಇದಕ್ಕೆ ಪ್ರತಿಕ್ರಿಯಿಸಿ ನನ್ನ ತಂದೆ ಎಂಥವರು ಎಂಬುದನ್ನು ತಿಳಿಸಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲೂ ‘ಎರಡು ಕ್ವಾಟರ್ ಕೊಟ್ಟರೆ ನನ್ನ ಮಕ್ಕಳು ಒಳ್ಳೆಯವರು ಎಂದು ಹೇಳುವ ಪುಣ್ಯಾತ್ಮ ನಮ್ಮಪ್ಪ’, ನಮ್ಮನ್ನು ಓದಿಸಲಿಲ್ಲ, ಬೆಳಸಲಿಲ್ಲ, ಸಾಕಲಿಲ್ಲ ಎಂದೆಲ್ಲಾ ಬರೆದುಕೊಂಡಿದ್ದರು. ಇದೀಗ ಮಗಳು ಚೈತ್ರಾಳ ಆರೋಪಕ್ಕೆ ತಂದೆ ಬಾಲಕೃಷ್ಣ ನಾಯಕ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ‘ನನಗೆ ಕುಡಿಯುವ ಅಭ್ಯಾಸ ಇದೆ ಎಂಬುದಾದರೆ ಊರಿನ ಜನರು ಹೇಳಲಿ. ವೈದ್ಯರಿಂದ ನನ್ನ ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ’ ಎಂದು ಬಾಲಕೃಷ್ಣ (Balakrishna Naik) ಅವರು ನೇರವಾಗಿ ಸವಾಲು ಹಾಕಿದ್ದಾರೆ. ‘ಕುಡುಕ ಎಂಬ ಮಾತನ್ನು ನಾನು ಒಪ್ಪಲ್ಲ. ನಮ್ಮ ತಂದೆಯ ಕಾಲದಿಂದಲೂ ಯಾರೂ ಕುಡಿದಿಲ್ಲ. ಒಂದು ವೇಳೆ ಕುಡುಕ ಆಗಿದ್ದರೆ ನನಗೆ ಹೆಣ್ಣು ಕೊಡುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
Comments are closed.