Chaitra Kundapura : ತಾಯಿ, ಮಗಳ ಮೇಲೆ ಚೈತ್ರಾ ಕುಂದಾಪುರ ತಂದೆ ಸಾಲು ಸಾಲು ಆರೋಪ – ಒಂದೊಂದು ಮಾತಿಗೂ ಕೌಂಟರ್ ಕೊಟ್ಟ ತಾಯಿ ರೋಹಿಣಿ

Chaitra Kundapura: ಹಿಂದೂ ಫೈರ್ ಬ್ರಾಂಡ್ ಆಗಿ ಖ್ಯಾತಿಗಳಿಸಿರುವ ಚೈತ್ರ ಕುಂದಾಪುರ ಅವರು ಇತ್ತೀಚಿಗಷ್ಟೇ ಹಸೆಮಣೆ ಏರಿದ್ದಾರೆ. ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಚೈತ್ರ ಬಿಗ್ ಬಾಸ್ ಗೆ ಹೋಗುವ ಮುಖಾಂತರ ಜನಮನ ಗೆದ್ದಿದ್ದರು. ಇನ್ನು ಚೈತ್ರ ಕುಂದಾಪುರ ಅವರು ಎಲ್ಲೆಡೆ ತಮ್ಮ ತಾಯಿ ಮತ್ತು ತಂಗಿಯನ್ನು ಪರಿಚಯಿಸುತ್ತಲೇ ಇದ್ದರು. ಆದರೆ ಇವರ ತಂದೆ ಯಾರು ಎಂಬುದು ಹಲವರಿಗೆ ಕುತೂಹಲವಾಗಿತ್ತು. ಮದುವೆ ಸಮಯದಲ್ಲೂ ಕೂಡ ಚೈತ್ರ ತಮ್ಮ ತಂದೆಯನ್ನು ಪರಿಚಯಿಸಿರಲಿಲ್ಲ. ಹೀಗಾಗಿ ಜನರ ಕುತೂಹಲ ಇನ್ನೂ ಹೆಚ್ಚಾಗಿತ್ತು. ಆದರೆ ಇದರ ನಡುವೆಯೇ ಚೈತ್ರ ಕುಂದಾಪುರ ಅವರ ತಂದೆ ದಿಢೀರ್ ಎಂದು ಪ್ರತ್ಯಕ್ಷ ಆಗಿ, ಮಾಧ್ಯಮದವರ ಎದುರು ಮಗಳು ಮತ್ತು ತನ್ನ ಹೆಂಡತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂದೆಯ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚೈತ್ರ ಕುಂದಾಪುರ ಅವರು ಇದಕ್ಕೆ ಪ್ರತಿಕ್ರಿಯಿಸಿ ನನ್ನ ತಂದೆ ಎಂಥವರು ಎಂಬುದನ್ನು ತಿಳಿಸಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲೂ ಬರೆದುಕೊಂಡು ತಂದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಬೆನ್ನಲ್ಲೇ ಚೈತ್ರ ಕುಂದಾಪುರ ತಾಯಿ ರೋಹಿಣಿ ಅವರು ತನ್ನ ಗಂಡನ ಒಂದೊಂದು ಮಾತಿಗೂ ಕೂಡ ಕೌಂಟರ್ ನೀಡಿದ್ದಾರೆ.
ತಾಯಿ ರೋಹಿಣಿ ಹೇಳಿದ್ದು ಏನು?
“ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ. ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ. ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ. ಅವರು ಯಾವ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ.ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲಿ ಹೋಗುತ್ತಾರೆ ದುಡಿದ ಹಣವನ್ನು ದೊಡ್ಡ ಮಗಳಿಗೆ ತಂದು ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ. ಮಕ್ಕಳಿಗೆ ಓದಿಸುವಾಗಲು ಸಹಾಯ ಮಾಡಿಲ್ಲ ಕೆಲಸಕ್ಕೆ ಹಾಕು ಎನ್ನುತ್ತಿದ್ದರು. ಮೂರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದ್ದು ಅವರಲ್ಲ. ಆ ಕಾಲದಲ್ಲಿ ಒಂದೂವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು. ಅವರು ಕಟ್ಟಿದ ಮನೆ ಬಿದ್ದು ಹೋಗಿದೆ”
“ನಾನು ಚೂರುಪಾರು ಹಣ ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ. ಅದನ್ನು ಕೂಡ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ. ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು ಚೈತ್ರಾ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ಲೋನ್ ನಾವೇ ಮಾಡಿಕೊಟ್ಟಿದ್ದೇವೆ. ದೊಡ್ಡ ಮಗಳು ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕುವ ಸಂಚು ಮಾಡಿದ್ದಾಳೆ. ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಅಪ್ಪ ಮದುವೆಗೆ ಬರದ ಹಾಗೆ ದೊಡ್ಡ ಮಗಳು ತಡೆದಿದ್ದಾಳೆ. ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಮ್ಮ ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ”
“ಚೈತ್ರಾಳ ಮದುವೆಗೆ ಬರಬೇಕೆಂದು ಅವರ ತಂದೆಗೆ ತುಂಬಾ ಆಸೆ ಇತ್ತು. ಆದರೆ ಮದುವೆಗೆ ಬರುತ್ತೇನೆ ಎಂದು ಹೇಳಿದವರನ್ನು ದೊಡ್ಡ ಮಗಳು ತಡೆದಿದ್ದಾಳೆ. ಅವಳಿಗೆ ಆಸ್ತಿ ಪಡೆದ ನಾನು ಸಹಿ ಹಾಕಿಲ್ಲ ಎಂದು ಹೀಗೆ ಮಾಡುತ್ತಿದ್ದಾಳೆ. ನನ್ನ ಗಂಡ ಯಾವ ವಿಷಯದಲ್ಲಿ ಜವಾಬ್ದಾರಿ ತಗೊಂಡಿಲ್ಲ” ಎಂದಿದ್ದಾರೆ.
ಅಲ್ಲದೆ “ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ ಅವರು ಒಂದು ರೀತಿಯ ಮಾನಸಿಕ ಖಿನ್ನತೆಯ ವ್ಯಕ್ತಿ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನು ಮಾತನಾಡುತ್ತಾರೆ ಅನ್ನೋದೇ ಗೊತ್ತಾಗಲ್ಲ. ಅವರ ಅಣ್ಣ ಎಲ್ಲರೂ ಒಂದು ರೀತಿ ಮಾನಸಿಕ ವ್ಯಕ್ತಿಗಳು. ದೊಡ್ಡ ಮಗಳ ಮದುವೆಗೂ ಅವರು ಸರಿಯಾಗಿ ಬಂದಿಲ್ಲ. ಎಲ್ಲೋ ಬಸ್ಸು ಹತ್ತಿ ಕೂತವರನ್ನು ಹುಡುಗರು ಕರೆದುಕೊಂಡು ಬಂದಿದ್ದರು”
ಚೈತ್ರಾ ಕುಂದಾಪುರ ಅವರ ಪತಿ 12 ವರ್ಷದಿಂದ ನಮ್ಮ ಮನೆಯಲ್ಲಿ ಇರಲಿಲ್ಲ. ಎರಡು ಮೂರು ವರ್ಷದ ಹಿಂದೆ ನಮಗೆ ಅವನ ಪರಿಚಯವಾಗಿತ್ತು. ಅವನು ನಮ್ಮ ಮನೆಗೆ ಬಂದು ನೀರು ಸಹ ಕುಡಿಯುತ್ತಿರಲಿಲ್ಲ. ನಾನೇ ಹೆಣ್ಣು ಮಕ್ಕಳನ್ನು ಬೆಳೆಸಿದ್ದು. ಏನಾದರೂ ಹೇಳಿದರೆ ಹೊಡೆಯಲು ಬರುತ್ತಾರೆ. ಜಬರ್ದಸ್ತ್ ಮಾಡುತ್ತಾರೆ. ಇದನ್ನೆಲ್ಲ ನೋಡಿ ನೋಡಿ ನಮಗೆ ಸಾಕಾಗಿ ಅವರ ವಿಷಯ ಬಿಟ್ಟಿದ್ದೇವೆ ಎಂದು ರೋಹಿಣಿ ತಿಳಿಸಿದ್ದಾರೆ.
Comments are closed.