Kodagu: ಮಾದಕ ವಸ್ತು ಸಾಗಾಟ: ಆರೋಪಿ ಬಂಧನ!

Kodagu: ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಮಡಿಕೇರಿ ನಗರ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41)
ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ.
ದಿನಾಂಕ 14-05-2025 ರಂದು ಮಡಿಕೇರಿ ಮಹದೇವಪೇಟೆಯ ಎ.ವಿ. ಶಾಲೆಯ ಕಡೆಯಿಂದ ಅಬ್ಬಿಫಾಲ್ಸ್ ಗೆ ಹೋಗುವ ಜಂಕ್ಷನ್ ನಲ್ಲಿ ಈತ ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೋಲೀಸರು ಈತನನ್ನು ಬಂಧಿಸಿ ಈತನಿಂದ 3.66 ಗ್ರಾಂ. ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Comments are closed.