Home News Court: ಅಪ್ಪನ ವಿರುದ್ಧ ಕೇಸ್‌ ಹಾಕಿದ 8 ವರ್ಷದ ಬಾಲಕಿ; ಕೋರ್ಟ್‌ನಿಂದ ಸಿಕ್ಕಿತು 33 ಲಕ್ಷ...

Court: ಅಪ್ಪನ ವಿರುದ್ಧ ಕೇಸ್‌ ಹಾಕಿದ 8 ವರ್ಷದ ಬಾಲಕಿ; ಕೋರ್ಟ್‌ನಿಂದ ಸಿಕ್ಕಿತು 33 ಲಕ್ಷ ಪರಿಹಾರ

High Court

Hindu neighbor gifts plot of land

Hindu neighbour gifts land to Muslim journalist

Court: ಅಪಘಾತವೊಂದರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದ 8 ವರ್ಷದ ಬಾಲಕಿಯೊಬ್ಬಳು ತನ್ನ ಅಪ್ಪನ ವಿರುದ್ಧವೇ ಕೇಸು ಮಾಡಿ 32.41 ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಡಿ.2021 ರಲ್ಲಿ ನಡೆದ ಕಾರು ಅಪಘಾತದಲ್ಲಿ ತಾಯಿ ಕಳೆದುಕೊಂಡ ಬಾಲಕಿ ತನ್ನ ಅಮ್ಮ ಸಾಯಲು ಅಪ್ಪನೇ ಕಾರಣ ಎಂದು ಮೋಟಾರ್‌ ಅಪಘಾತ ಹಕ್ಕುಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಳು. ಅಪ್ರಾಪ್ತೆಯಾಗಿರವ ಕಾರಣ ಈಕೆಯ ಪರವಾಗಿ ಅಜ್ಜಿ ದೂರನ್ನು ದಾಖಲು ಮಾಡಿದ್ದರು.

ನಾಂದೇಡ್‌ನಿಂದ ಉಮರ್ಖೇಡ್‌ಗೆ ತಂದೆ ಚಲಾಯಿಸುತ್ತಿದ್ದ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. 38 ವರ್ಷದ ನರ್ಸಿಂಗ್‌ ಕಾಲೇಜಿನಲ್ಲಿ ಲೆಕ್ಚರರ್‌ ಆಗಿದ್ದ ತಾಯಿ ಈ ಘಟನೆಯಲ್ಲಿ ಮಾರಣಾಂತಿಕ ಗಾಯಗಳಿಂದ ಸಾವಿಗೀಡಾಗಿದ್ದರು. ವಿಚಾರಣೆ ಸಂದರ್ಭ ನ್ಯಾಯಾಲಯವು ತಂದೆಯ ನಿರ್ಲಕ್ಷ್ಯವನ್ನು ಕಂಡು ಹಿಡಿದಿದ್ದು, ಈ ಅಪಘಾತಕ್ಕೆ ತಂದೆಯೇ ಹೊಣೆ ಎಂದು ಹೇಳಿದೆ.

ನ್ಯಾಯಮಂಡಳಿಯು ಒಟ್ಟು ರೂ.32.41 ಲಕ್ಷ ರೂ ಪರಿಹಾರ ನೀಡಿದೆ. ಹಾಗೂ ಅರ್ಜಿ ಸಲ್ಲಿಸಿದ ದಿನಾಂಕದಿಂದ ನಷ್ಟ ಸಂಭವಿಸುವವರೆಗೆ ಶೇ.8 ರಷ್ಟು ವಾರ್ಷಿಕ ಬಡ್ಡಿ ನೀಡುವಂತೆ ನ್ಯಾಯಮಂಡಳಿ ಸೂಚಿಸಿದೆ.