Mangalore: ಅಕ್ಷರ ಸಂತ ಹಾಜಬ್ಬ ಅವರಿಗೆ ಪತ್ನಿ ವಿಯೋಗ!

Mangalore: ಸಾಮಾಜಿಕ ಕಾರ್ಯಕರ್ತ ಹರೇಕಳ ಹಾಜಬ್ಬ ಅವರ ಪತ್ನಿ ಮೈಮೂನ (57) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಸಂಜೆ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.

ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟ ಹರೇಕಳ ಹಾಜಬ್ಬ ಅವರು ಕೂಲಿಯಾಗಿ ಕೆಲಸ ಮಾಡುತ್ತಿದ್ದ ತಮ್ಮ ಊರಿನ ಮಕ್ಕಳಿಗೆ ಶಿಕ್ಷಣ ನೀಡುವ ಮಹದಾಸೆಯನ್ನು ಹೊಂದಿದವರು, ಅದಕ್ಕಾಗಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಇವರ ಈ ಕೆಲಸಕ್ಕೆ ಇವರಿಗೆ ಸಂದ ಪ್ರಶಸ್ತಿ, ಗೌರವಗಳು ಅಪಾರ. ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತಿದ್ದ ಹಾಜಬ್ಬರಿಗೆ ಅವರ ಪತ್ನಿ ಮೈಮೂನ ದೊಡ್ಡ ಶಕ್ತಿಯಾಗಿದ್ದರು. ಅವರ ಜೀವನ ಸಂಗಾತಿಯ ಅಗಲಿಕೆ ಹಾಜಬ್ಬ ಹಾಗೂ ಅವರ ಕುಟುಂಬಕ್ಕೆ ತುಂಬಲಾದ ನಷ್ಟವನ್ನು ಉಂಟು ಮಾಡಿದೆ.
ಮೈಮೂನ ಅವರ ಅಂತಿಮ ಸಂಸ್ಕಾರವು ಭಾನುವಾರ ಹರೇಕಳದಲ್ಲಿ ನಡೆಯಲಿದ್ದು, ಅವರ ನಿಧನಕ್ಕೆ ಸ್ಥಳೀಯ ಸಮುದಾಯ, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Comments are closed.