Pakistan Post: ‘ಬೆಂಗಳೂರು ಬಂದರು ದ್ವಂಸ ಮಾಡಿದ್ದೇವೆ’ – ಪಾಕಿಸ್ತಾನ ಪೋಸ್ಟ್ ಗೆ ಬಿದ್ದು ಬಿದ್ದು ನಕ್ಕ ಭಾರತ!!

Pakistan Post: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಇದಕ್ಕೂ ಮುಂಚಿತವಾಗಿ ಯುದ್ಧದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪಾಕ್ ನ ನೆಲೆಗಳನ್ನು ಧ್ವಂಸ ಮಾಡುತ್ತಲೇ ಇತ್ತು. ಆದರೆ ಅತ್ತ ಕೈಲಾಗದ ಪಾಕಿಸ್ತಾನವು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತದೆ. ಅಂತೆಯೇ ಪಾಕಿಸ್ತಾನ ಸುಳ್ಳು ಸುಳ್ಳಾಗಿ ಮಾಡಿಕೊಂಡ ಆ ಒಂದು ಪೋಸ್ಟನ್ನು ಕಂಡು ಭಾರತವು ಬಿದ್ದು ಬಿದ್ದು ನಕ್ಕಿದೆ.

ಹೌದು, ಪಾಕ್ ನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದು ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ಪಾಕ್ ನ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ತಮ್ಮ ನೌಕಾಪಡೆಯು ಪ್ರಮುಖ ಭಾರತೀಯ ಬಂದರುಗಳನ್ನು ನಾಶಪಡಿಸಿದೆ ಎಂದು ಬರೆದುಕೊಂಡಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ಜಲಪಡೆಯು ಬೆಂಗಳೂರು ಬಂದರು ಹಾಗೂ ಪಾಟ್ನಾ ಸಮುದ್ರ ಬಂದರುಗಳನ್ನು ನಾಶ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೊಲ್ ಆಗುತ್ತಿದೆ.
ವಾಸ್ತವವಾಗಿ ನೋಡುವುದಾದರೆ, ಬೆಂಗಳೂರು ಹಾಗೂ ಪಾಟ್ನಾ ಎರಡು ಕಡೆ ಕೂಡ ಯಾವುದೇ ಸಮುದ್ರವಿಲ್ಲ ಹಾಗೂ ಯಾವುದೇ ಬಂದರು ಕೂಡ ಇಲ್ಲ.. ಹೀಗಿರುವ ಪಾಕ್ ನ ಸುಳ್ಳಿನ ಜಾಲಕ್ಕೆ ಇಡೀ ವಿಶ್ವವೇ ನೋಡಿ ನಗುತ್ತಿದೆ.
Comments are closed.