Sudarshan Chakra: ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ಲ್ಯಾನ್‌; ಸುದರ್ಶನ್‌ ಚಕ್ರ ಬಳಸಿದ ಭಾರತೀಯ ಸೇನೆ!

Share the Article

Sudarshan Chakra: ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ಲ್ಯಾನ್‌ ಮಾಡಿದ್ದು, ಇದಕ್ಕೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತೀಯ ವಾಯುಪಡೆ ಬುಧವಾರ ರಾತ್ರಿ ತನ್ನ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜನೆ ಮಾಡಿದ್ದು ಮತ್ತು ಅಪರೇಷನ್‌ ಸಿಂಧೂರ್‌ಗೆ ಪ್ರತೀಕಾರವಾಗಿ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ವಿಫಲಗೊಳಿಸಿದೆ ಎಂದು ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಅನೇಕ ಮಿಲಿಟರಿ ಗುರಿಗಳನ್ನು ಹೊಡೆಯಲು ಪ್ರಯತ್ನ ಪಟ್ಟಿತ್ತು. ಅಂತಿಪೋರಾ, ಶ್ರೀನಗರ, ಜಮ್ಮು, ಪಠಾಣ್ಕೋಟ್‌, ಅಮೃತಸರ, ಲುಧಿಯಾನ, ಭುಹ್ನಲ್ಲಿನ ನೆಲೆಗಳನ್ನು ಗುರಿಯಾಗಿಸಿತ್ತು. ಇದಕ್ಕೆ ಭಾರತ ʼಸುದರ್ಶನ ಚಕ್ರʼ ಎಂದು ಕರೆಯಲ್ಪಡುವ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳು ಈ ಕ್ಷಿಪಣಿಗಳನ್ನು ಧ್ವಂಸಗೊಳಿಸದೆ.

Comments are closed.