Pakistan: ಚೀನಾ ನಿರ್ಮಿತ ಪಾಕ್ ಸೇನೆಯ ಏರ್ ಡಿಫೆನ್ಸ್ ಸಿಸ್ಟಮ್ ಭಾರತೀಯ ಸೇನೆಯಿಂದ ಧ್ವಂಸ!

Pakisthan: ಪಾಕಿಸ್ತಾನದ ಸೇನೆ ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ಪ್ರಮಾಣದಲ್ಲಿ ಆರ್ಟಿಲ್ಲರಿ ದಾಳಿ ಮಾಡಿತ್ತು. ಇಂದು ಭಾರತ ಇದಕ್ಕೆ ಪ್ರತಿಯಾಗಿ ಬೆಳಗ್ಗೆ ಭಾರತ, ಪಾಕಿಸ್ತಾನದ ಮಿಲಿಟರಿ ಆಸ್ತಿಗಳ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ರಭಸಕ್ಕೆ ಪಾಕಿಸ್ತಾನದಲ್ಲಿದ್ದ ಚೀನಾ ನಿರ್ಮಿತ ಏರ್ ಡಿಫೆನ್ಸ್ ರಡಾರ್ ಹಾಗೂ ಸಿಸ್ಟಮ್‌ಗಳು ಧ್ವಂಸವಾಗಿದೆ.

ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕೃತವಾಗಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್, ರಾಜೌರಿ ವಲಯಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯುದ್ದಕ್ಕೂ ಮಾರ್ಟರ್‌ಗಳು ಮತ್ತು ಭಾರೀ ಕ್ಯಾಲಿಬರ್ ಫಿರಂಗಿಗಳನ್ನು ಬಳಸಿ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ರಕ್ಷಣಾ ಇಲಾಖೆ ತಿಳಿಸಿದ್ದೇನು?
ಮೇ 07-08, 2025 ರ ರಾತ್ರಿ, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ತಟಸ್ಥಗೊಳಿಸಿದವು. ಈ ದಾಳಿಯ ಅವಶೇಷಗಳನ್ನು ಈಗ ಪಾಕಿಸ್ತಾನದ ದಾಳಿಯನ್ನು ಸಾಬೀತುಪಡಿಸುವ ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯಾದ್ಯಂತ ಮಾರ್ಟರ್‌ಗಳು ಮತ್ತು ಭಾರೀ ಕ್ಯಾಲಿಬರ್ ಫಿರಂಗಿಗಳನ್ನು ಬಳಸಿಕೊಂಡು ತನ್ನ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಹದಿನಾರು ಅಮಾಯಕರು ಬಲಿಯಾಗಿದ್ದಾರೆ. ಇಲ್ಲಿಯೂ ಸಹ, ಪಾಕಿಸ್ತಾನದಿಂದ ಮಾರ್ಟರ್ ಮತ್ತು ಫಿರಂಗಿ ಗುಂಡಿನ ದಾಳಿಯನ್ನು ನಿಲ್ಲಿಸಲು ಭಾರತವು ಪ್ರತಿಕ್ರಿಯಿಸಬೇಕಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಸುವರ್ಣ ನ್ಯೂಸ್ ಪ್ರಕಟ ಮಾಡಿದೆ.
Comments are closed.