Kasaragodu: ಹಲಸಿನ ಹಣ್ಣು ತುಂಡರಿಸುತ್ತಿದ್ದ ಕತ್ತಿಯ ಮೇಲೆ ಬಿದ್ದು ಬಾಲಕ ಮೃತ್ಯು !!

Kasaragodu : ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಕತ್ತಿ ಮೇಲೆ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ಬುಧವಾರ ಸಂಜೆ ನಡೆದಿದೆ.

ಬೆಳ್ಳೂರಡ್ಕದ ಅಮೀರ್- ಝುಲೈಕಾ ದಂಪತಿಯ ಪುತ್ರ ಹುಸೈನ್ ಶಹಬಾಝ್ ಮೃತಪಟ್ಟ ಬಾಲಕ. ತಾಯಿ ಜೊತೆ ಆಲಂಪಾಡಿ ಬೆಳ್ಳೂರಡ್ಕದಲ್ಲಿರುವ ಅಜ್ಜಿ ಮನೆಗೆ ಹುಸೈನ್ ಬಂದಿದ್ದನು. ತಾಯಿ ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕತ್ತಿಯ ಮೇಲೆ ಬಿದ್ದು ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಎದೆಗೆ ಉಂಟಾದ ಬಲವಾದ ಗಾಯ ಸಾವಿಗೆ ಕಾರಣ ಎನ್ನಲಾಗಿದೆ.
ಎದೆಗೆ ಉಂಟಾದ ಗಂಭೀರ ಗಾಯ ಕಾರಣ ಎನ್ನಲಾಗಿದೆ. ಅವಳಿ ಮಕ್ಕಳಲ್ಲಿ ಹುಸೈನ್ ಒಬ್ಬನಾಗಿದ್ದಾನೆ. ವಿದ್ಯಾನಗರ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.