Home News Subsidy for Marriage: ಕಾರ್ಮಿಕರಿಗೆ ಸಿಹಿ ಸುದ್ದಿ; ಮದುವೆಗೆ ದೊರಕಲಿದೆ ರೂ.60000 ಸಹಾಯಧನ!

Subsidy for Marriage: ಕಾರ್ಮಿಕರಿಗೆ ಸಿಹಿ ಸುದ್ದಿ; ಮದುವೆಗೆ ದೊರಕಲಿದೆ ರೂ.60000 ಸಹಾಯಧನ!

Hindu neighbor gifts plot of land

Hindu neighbour gifts land to Muslim journalist

Subsidy for Marriage: ರಾಜ್ಯ ಸರಕಾರ ಕಾರ್ಮಿಕರ ಮದುವೆಗೆ ರೂ.60000 ಸಹಾಯಧನ ನೀಡುತ್ತಿದ್ದು, ಅರ್ಹ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

ನೋಂದಾಯಿತ ಕಾರ್ಮಿಕರ ಮದುವೆ ಅಥವ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದು. ಮೊದಲನೆ ಮದುವೆಗೆ ಅಥವಾ ಫಲಾನುಭವಿಯ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ರೂ.60000 ಗಳನ್ನು ಸಹಾಯಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ರೀತಿ ಇಲ್ಲಿ ನೀಡಲಾಗಿದೆ;
ಮೊದಲು https://karbwwd.karnataka.gov.in/kn ಗೆ ಭೇಟಿ ನೀಡಿ
ಲಾಗಿನ್‌ ಆಗಬೇಕು
Registrtion ಮೇಲೆ ಕ್ಲಿಕ್‌ ಮಾಡಿ
ಸ್ಕೀಮ್ಸ್‌ ಯೋಜನೆಗಳ ಮೇಲೆ ಕ್ಲಿಕ್‌ ಮಾಡಿ
ಮದುವೆ ಸಹಾಯಧನ ಮೇಲೆ ಕ್ಲಿಕ್‌ ಮಾಡಿ
ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ, ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿ
ನಂತರ submit ಮೇಲೆ ಕ್ಲಿಕ್‌ ಮಾಡಿ. ಅರ್ಜಿ ಸಲ್ಲಿಸಿ

ಬೇಕಾಗುವ ದಾಖಲೆಗಳು;
ಆಧಾರ್‌ ಕಾರ್ಡ್‌, ಬ್ಯಾಂಕ್‌ ವಿವರಗಳು, ಮ್ಯಾರೇಜ್‌ ಸರ್ಟಿಫಿಕೇಟ್‌, ಮದುವೆ ಕರ್ನಾಟಕ ಹೊರಗೆ ನಡೆದಿದ್ದಲ್ಲಿ ಅಫಿಡವಿಟ್‌ ಸಲ್ಲಿಸುವುದು.

ಗಮನಿಸಬೇಕಾದ ವಿಷಯಗಳು;
ಮದುವೆ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
ಕಟ್ಟಡ ಕಾರ್ಮಿಕನ ಮಗ/ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮದುವೆ ಆಗಿರುವ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.