Home News Ayodhya: 300 ವರ್ಷ ಪದ್ಧತಿಗೆ ಬ್ರೇಕ್‌ ಹಾಕಿದ ಅಯೋಧ್ಯೆಯ ಹನುಮಾನ್ ಗಢಿ ದೇವಾಲಯದ ಪ್ರಧಾನ ಅರ್ಚಕ!!

Ayodhya: 300 ವರ್ಷ ಪದ್ಧತಿಗೆ ಬ್ರೇಕ್‌ ಹಾಕಿದ ಅಯೋಧ್ಯೆಯ ಹನುಮಾನ್ ಗಢಿ ದೇವಾಲಯದ ಪ್ರಧಾನ ಅರ್ಚಕ!!

Hindu neighbor gifts plot of land

Hindu neighbour gifts land to Muslim journalist

Ayodhya: ಅಯೋಧ್ಯೆಯ ಹನುಮಾನ್‌ಗಢಿ ದೇಗುಲದ ಪ್ರಧಾನ ಅರ್ಚಕರಾದ ಮಹಾಂತ್‌ ಪ್ರೇಮ್‌ ದಾಸ್‌ ಸುಮಾರು 300 ವರ್ಷ ಪದ್ಧತಿಗೆ ಬ್ರೇಕ್‌ ಹಾಕಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹೌದು, ಮಹಾಂತ್‌ ಪ್ರೇಮ್‌ ದಾಸ್‌ ಬುಧವಾರ ಅಕ್ಷಯ ತೃತೀಯಾದ ಪ್ರಯುಕ್ತ ಬಾಲ ರಾಮನ ದೇವಾಲಯಕ್ಕೆ ಭೇಟಿ ನೀಡಲೆಂದು ಇದೇ ಮೊದಲ ಬಾರಿಗೆ ಹೊರಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ 300 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿದು ದಾಖಲೆ ಮಾಡಿದ್ದಾರೆ.

ಅಂದಹಾಗೆ ಅಯೋಧ್ಯೆಯ ಹನುಮಾನ್‌ಗಢಿ ದೇಗುಲದ ಪ್ರಧಾನ ಅರ್ಚಕರು ತಮ್ಮ ಜೀವನವಿಡೀ ದೇಗುಲದ ಆವರಣ ಬಿಟ್ಟು ಹೊರಬರದಂತೆ ನಿರ್ಬಂಧವನ್ನು ಹೇರಿರುವ ಸಂಪ್ರದಾಯವನ್ನು 288 ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ರಾಮನ ದೇವಾಲಯಕ್ಕೆ ಭೇಟಿ ನೀಡುವ ಇಂಗಿ ತ ವಿದ್ದರಿಂದ ದಾಸ್‌ ಈ ನಿರ್ಣಯ ಕೈಗೊಂಡಿದ್ದು, ಭವ್ಯ ಮೆರವಣಿಗೆಯ ಮೂಲಕ ರಾಮನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.