Theft: 260 ಮನೆಗಳಲ್ಲಿ ಭರ್ಜರಿ ಕಳ್ಳತನ; ಊರಿಗೇ ಊಟ ಹಾಕಿಸಿದ್ದ ಐನಾತಿ ಕಳ್ಳ!

Share the Article

Theft: ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧ ಕಡೆ ಕಳ್ಳತನ ಪ್ರಕರಣದಲ್ಲಿ ತೊಡಗಿಕೊಂಡಿದ್ದ ಕಳ್ಳ, ಸರಿ ಸುಮಾರು 260 ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಂತರಾಜ್ಯ ಕುಖ್ಯಾತ ಮನೆಗಳ್ಳನನ್ನು ಕಲಬುರಗಿ ಪೊಲೀಸರು ಬಂಧನ ಮಾಡಿರುವ ಘಟನೆ ನಡೆದಿದೆ.

ಕಾರು ಚಾಲಕ ಶಿವಪ್ರಸಾದ್‌ ಅಲಿಯಾಸ್‌ ಮಂತ್ರಿ ಶಂಕರ್‌ (56) ಬಂಧಿತ ವ್ಯಕ್ತಿ. ಈತ ಹೈದ್ರಾಬಾದ್‌-ಸಿಕಂದ್ರಾಬಾದ್‌ ಮೂಲದವನು.

ಈತ ಕಲಬುರಗಿಯ ಮನೆಯೊಂದರಲ್ಲಿ ಚಿನ್ನಾಭರಣ ಸೇರಿ 14.60 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಕದ್ದು ಪರಾರಿಯಾಗಿದ್ದು, ಚಿನ್ನಾಭರಣಗಳಲ್ಲಿ ಕೆಲವನ್ನು ಮಾರಿ ಬಂದ ಹಣದಲ್ಲಿ ಲಾತೂರಿನಲ್ಲಿರುವ ಅನ್ಸಾರಿ ವಾಡಿಯಲ್ಲಿ ಇಡೀ ಊರಿಗೇ ಭೂರಿ ಬೋಜನ ಹಾಕಿಸಿದ್ದ.

ಕಳ್ಳತನದ ಹಣದಿಂದ ಈತ ಅನ್ನದಾನಕ್ಕೆ, ದೇವಾಲಯದ ನಿಧಿ ದಾನ ಮಾಡುತ್ತಿದ್ದ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅನ್ನದಾನಕ್ಕಾರಿ ರೂ.5 ಲಕ್ಷವನ್ನೂ ನೀಡಿದ್ದ. ಕಳ್ಳತನದ ಪಾಪ ಪ್ರಜ್ಞೆಯಿಂದ ದೂರವಾಗಲೂ ಈ ರೀತಿ ದಾನ ಧರ್ಮ, ಗುಡಿಗಳಿಗೆ ದೇಣಿಗೆ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ಇಷ್ಟು ಮಾತ್ರವಲ್ಲದೇ ಆರೋಪಿ ಐದು ಜನರನ್ನು ಮದುವೆಯಾಗಿದ್ದು, ನಾಲ್ವರು ಪತ್ನಿಯರು ಆಂಧ್ರ, ತೆಲಂಗಾಣದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡುವಾಗ ಲಾತೂರ ಜಿಲ್ಲೆಯ ನಿಲಂಗಾದ ಅನ್ಸರವಾಡದಲ್ಲಿದಲ್ಲ ಮಹಿಳೆಯನ್ನು ವಿವಾಹವಾಗಿದ್ದನು. ಎಲ್ಲರಿಗೂ ಮಕ್ಕಳಿದ್ದಾರೆ.

ದೊಡ್ಡ ದೊಡ್ಡ ಬಂಗಲೆಯ ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್‌. ಎಲ್ಲಿಯೂ ಬೆರಳಚ್ಚು ಸಿಗದಂತೆ ಎಚ್ಚರ ವಹಿಸಿ ಕಳ್ಳತನ ಮಾಡುತ್ತಿದ್ದ. ಸಿಸಿ ಟಿವಿ ಕ್ಯಾಮೆರಾಗಳು ಕಂಡಲ್ಲಿ ಈತ ಅಂತಹ ಮನೆಗಳನ್ನು ದೋಚುತ್ತಿರಲಿಲ್ಲ.

Comments are closed.