Home News ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಾಗಿ ರಕ್ಷಿತ್ ಶಿವರಾಮ್ ಭರವಸೆ!

ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಾಗಿ ರಕ್ಷಿತ್ ಶಿವರಾಮ್ ಭರವಸೆ!

Hindu neighbor gifts plot of land

Hindu neighbour gifts land to Muslim journalist

Beltangady: ಬೆಳ್ತಂಗಡಿಯಲ್ಲಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಾಗಿ ರಾಜ್ಯ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭರವಸೆ ನೀಡಿದ್ದಾರೆ.

ಸೋಮವಾರ ಬೆಳ್ತಂಗಡಿಯಲ್ಲಿ ನಡೆದ ದಲಿತ ಚಳವಳಿ 50ರ ಸಂಭ್ರಮ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮೀಸಲಾತಿ ಎಂಬುದು ದಲಿತರ ಹಕ್ಕಾಗಿದ್ದು ಅದು ಯಾರ ಭಿಕ್ಷೆಯೂ ಅಲ್ಲ. ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸುವ ಮೂಲಕ ತಾನು ಯಾವತ್ತೂ ದಲಿತರ ಸೇವೆಗೆ ಪ್ರಾಮಾಣಿಕವಾಗಿ ಮುಂದಾಗುತ್ತೇನೆಂದು, ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.

ಇದೇ ವೇಳೆ ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಮತ್ತು ತಾಲೂಕಿನ ದಲಿತ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿ, ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ, ದಲಿತ ಶೋಷಣೆ, ಅಧಿಕಾರಶಾಹಿ ಭೂ ಮಾಲೀಕರಿಂದ ದಲಿತರ ಭೂಮಿ ಕಬಳಿಕೆ, ಮೋಸ, ವಂಚನೆ, ಅತ್ಯಾಚಾರ, ಅನಾಚಾರಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಯಾವುದೇ ಸರ್ಕಾರಗಳು ದಲಿತರ ಪರವಾಗಿ ನಿಂತು ನ್ಯಾಯ ಕೊಡಿಸುವುದರ ಬದಲು ಅಧಿಕಾರಶಾಹಿ ಮೇಲ್ವರ್ಗಗಳ ಬೆಂಬಲಕ್ಕೆ ನಿಲ್ಲುತ್ತಿರುವ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.