ಆರ್‌ಸಿಬಿ ವಿಕೆಟ್ ತೆಗೆದ್ರೆ, ಬೌಂಡರಿ, ಸಿಕ್ಸರ್‌ ಬಾರಿಸಿದ್ರೆ ಉಚಿತ ಬಿಯರ್, ಡಿಸ್ಕೌಂಟ್ ಊಟ- ಪಬ್‌ನ ಬಿಗ್ ಆಫರ್!

Share the Article

Bengaluru: ಐಪಿಎಲ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರಲ್ಲೂ RCB ಮ್ಯಾಚ್ ಅಂದ್ರೆ ಇನ್ನೂ ಕ್ರೇಜ್ ಸ್ವಲ್ಪ ಜಾಸ್ತಿನೇ. ಇವತ್ತಿನ RCB ಮ್ಯಾಚ್ ಗೆ ಬೆಂಗಳೂರಿನ ಪಬ್ ಒಂದು ಹಾಟ್ ಗೆ ಹಾಟ್ ಕೋಲ್ಡ್ ಗೆ ಕೋಲ್ಡ್ ಆಗಿರೋ ಆಫರ್ ನೀಡಿದೆ.

ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿರುವ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ವಿಕೆಟ್ ತೆಗೆದ್ರೆ, ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ್ರೆ ಗ್ರಾಹಕರಿಗೆ ಉಚಿತ ಬಿಯರ್ ಹಾಗೂ ಭಾರೀ ಡಿಸ್ಕೌಂಟ್ ನಲ್ಲಿ ಊಟ ಕೊಡುವುದಾಗಿ ಬೆಂಗಳೂರಿನ ಪಬ್‌ ಮಾಲೀಕರೊಬ್ಬರು ಘೋಷಣೆ ಮಾಡಿದ್ದಾರೆ.

ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ವೇಜ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದ್ದ ಆರ್‌ಸಿಬಿ ಅದೇ ತಂಡದ ವಿರುದ್ಧ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಹಠದಲ್ಲಿದೆ

Comments are closed.