Yatnal: ಸಿದ್ದರಾಮಯ್ಯ, ಮಹಾದೇವಪ್ಪ ಪುತ್ರ ಕಾಶ್ಮೀರಕ್ಕೆ ಹೋಗಿದ್ರೆ ಗುಂಡು ಹೊಡಿತಿದ್ರು; ಜಮೀರ್ ಮಗ ಮಾತ್ರ ವಾಪಸ್ ಬರುತ್ತಿದ್ದ – ಯತ್ನಾಳ್ ಅಚ್ಚರಿ ಹೇಳಿಕೆ

Share the Article

Yatnal: ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಹಟ್ಟಹಾಸಕ್ಕೆ 28 ಅಮಾಯಕರು ಬಲಿಯಾಗಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಹುಚ್ಚಾಟಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ನಾಯಕರ ಮಕ್ಕಳನ್ನು ಮಧ್ಯಕ್ಕೆ ಎಳೆದು ತಂದು ಲೇವಡಿ ಮಾಡಿದ್ದಾರೆ.

ಹೌದು, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಯಾವ ಧರ್ಮದವರು ಎಂದು ಹೇಳಿ ಗುಂಡು ಹಾರಿಸಿದ್ದಾರೆ. ಹಾಗಾಗಿ ಇದೀಗ ಎಲ್ಲ ಹಿಂದೂಗಳು ಒಂದಾಗುವ ಸಮಯ ಬಂದಿದೆ. ಕಾಶ್ಮೀರಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ, ಸಚಿವರಾದ ಮಹದೇವಪ್ಪ ಪುತ್ರ, ಜಮೀರ್ ಪುತ್ರ ಹೋಗಿದ್ರೆ ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ. ಸಿಎಂ ಸಿದ್ದರಾಮಯ್ಯ ಮಾದೇವಪ್ಪ ಪುತ್ರರಿಗೆ ಗುಂಡು ಹೊಡೆಯುತ್ತಿದ್ದರು ಯಾಕಂದ್ರೆ ಸಿದ್ದರಾಮಯ್ಯ ಮಹಾದೇವಪ್ಪ ಮಕ್ಕಳು ಹಿಂದೂಗಳು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ. ಪಾಕಿಸ್ತಾನ ಏಜೆಂಟರಂತೆ ವರ್ತಿಸುತ್ತಾರೆ. ಯುದ್ಧ ಬೇಕಾಗಿಲ್ಲ ಎಂದು ಹೇಳೋಕೆ ಸಿದ್ದರಾಮಯ್ಯ ಯಾರು? ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ? ಪಾಕಿಸ್ತಾನದ ಒಂದು ರಾಜ್ಯದ ಮುಖ್ಯಮಂತ್ರಿಯೋ? ಎಂದು ವಾಗ್ದಾಳಿ ನಡೆಸಿದರು.

Comments are closed.