Certificate Course: ಒಂದೇ ವರ್ಷದಲ್ಲಿ 175 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 15ರ ಬಾಲಕಿ !!

Share the Article

Certificate Course: ‘ಸಾಧಿಸಿದರೆ ಸಬಲ ನುಂಗಬಹುದು’ ಎಂಬ ಮಾತಿದೆ. ಇದಕ್ಕೆ ಮಾದರಿ ಎಂಬಂತೆ ಇಲ್ಲೊಬ್ಬಳು 15ರ ಬಾಲಕಿ ನಮ್ಮ ಗಮನ ಸೆಳೆಯುತ್ತಾಳೆ. ಯಾಕೆಂದರೆ ಈಕೆ ತನ್ನ 15 ವರ್ಷದಲ್ಲೇ ಸುಮಾರು 175 ವೃತ್ತಿಪರ ಕೋರ್ಸ್ ಗಳನ್ನು ಪೂರ್ಣಗೊಳಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾಳೆ. ಅದೂ ಕೂಡ ಒಂದು ವರ್ಷದಲ್ಲಿ ಎಂಬುದು ಗಮನಾರ್ಹ ಸಂಗತಿ.

ಹೌದು, ವಿಶಾಖಪಟ್ಟಣದ ಭೀಮಿಲಿಯಲ್ಲಿರುವ ಕಸ್ತೂರ್ಬಾ ಗಾಂಧಿ ವಿದ್ಯಾಲಯದಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿರುವ ಪ್ರವಳಿಕಾ, ಮೂಲತಃ ಅನಕಪಲ್ಲಿ ಜಿಲ್ಲೆಯ ಕೊನೆಂಪಲೆಂ ಎಂಬ ಗ್ರಾಮದವಳು. 15 ವರ್ಷದ ಈಕೆ ವೃತ್ತಿಪರ ಅಗತ್ಯಗಳನ್ನು ಪೂರೈಸುವ ಹಾಗೂ ಉದ್ಯೋಗ ಕೌಶಲ್ಯಗಳನ್ನು ತಿಳಿಸುವ 175 ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕೇವಲ ಒಂದು ವರ್ಷದೊಳಗೆ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾಳೆ.

ಸಮಯ ನಿರ್ವಹಣೆ, ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಸಾಫ್ಟ್‌ವೇರ್, ಡ್ರೋನ್ ತಂತ್ರಜ್ಞಾನ, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹಲವು ವಿಷಯಗಳ ಕೋರ್ಸ್‌ಗಳನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸಿರುವುದು ಪ್ರವಳಿಕಾಳ ಸಾಧನೆ. ಪ್ರವಳಿಕಾಳ ಸಾಧನೆ ಕಂಡು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರತಿನಿಧಿಗಳು ವಿದ್ಯಾರ್ಥಿಯನ್ನು ಅಭಿನಂದಿಸಿದಲ್ಲದೇ ದೆಹಲಿಯಿಂದ ಬಂದು ಒಂದು ವಿಶೇಷ ಸಂದರ್ಶನ ಕೂಡ ನಡೆಸಿದ್ದಾರೆ.

ಇನ್ನು ಬಿ.ಟೆಕ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಮಾಡಲು ಯೋಜಿಸುತ್ತಿರುವ ಪ್ರವಳಿಕಾ, ಭವಿಷ್ಯದಲ್ಲಿ ನಾಗರಿಕ ಸೇವೆಗಳಿಗೆ ಸೇರುವ ಗುರಿಯನ್ನು ಹೊಂದಿದ್ದಾರೆ. ಅವರ ಸಮರ್ಪಣೆ, ಪರಿಶ್ರಮ ಮತ್ತು ಮಹತ್ವಾಕಾಂಕ್ಷೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

Comments are closed.