Koppala: ಹುಲಿಗೆಮ್ಮ ದೇವಿ ಹುಂಡಿಯಲ್ಲಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆಯ ಪತ್ರ!

Koppala: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಕಾಣಿಕೆಯ ಹುಂಡಿ ಎಣಿಸುವಾಗ ಎರಡು ವಿಚಿತ್ರ ಕೋರಿಕೆಯ ಪತ್ರಗಳು ದೊರಕಿರುವ ಕುರಿತು ವರದಿಯಾಗಿದೆ.

“ಶ್ರೀ ಹುಲಿಗೆಮ್ಮದೇವಿ ತಾಯಿ, ನನ್ನ ಮಗಳ ಮೇಲೆ ಸದಾ ನಿನ್ನ ದಯೆ ಇರಲಿ. ನನ್ನ ಡಿ.ಎಡ್ ಯಾವುದೇ ರೀತಿಯ ತೊಂದರೆ ಆಗದೇ ನಡೆಸು ತಾಯಿ. ಈ ಶಾಲೆಯಲ್ಲೇ ಸರಕಾರಿ ಕೆಲಸ ಸಿಗಲಿ. ನನ್ನ ಪ್ರೀತಿ ಉಳಿಸಿ, ಎಲ್ಲರ ಹಾಗೆ ಜೀವನ ಮಾಡುವ ಭಾಗ್ಯ ಕೊಡು ತಾಯಿ. ನನ್ನ ಮಗಳಿಗೆ ತಂದೆಯ ಪ್ರೀತಿಯನ್ನು ದೊರಕಿಸಿ ಕೊಡು. ನನ್ನ ಅವರ ಮದುವೆ ಮಾಡಿಸು ತಾಯಿ. ಈ ನನ್ನ ಕೋರಿಕೆಯನ್ನು ನಡೆಸುವಿ ಎಂದು ನಿನ್ನನ್ನು ಸದಾ ನಂಬಿ ಬದುಕಿರುತ್ತೇನೆ ತಾಯಿ”. ಎಂಬ ಚೀಟಿ ಸಿಕ್ಕಿದೆ.
“ಶ್ರೀ ಹುಲಿಗೆಮ್ಮ ತಾಯಿ, ಪರೀಕ್ಷೆಯಲ್ಲಿನನಗೆ ಇಷ್ಟು ಮಾರ್ಕ್ಸ್ ಇರಬೇಕು ದೇವರೆ. ಗಣಿತ: 40, 38, 45, 39. ಇಂಗ್ಲಿಷ್ 38, 45, 40. ಕನ್ನಡ: 45, 40. 2: ವಿಜ್ಞಾನ: 42, 45. ಹಿಂದಿ: 42, 40. ಸಮಾಜ : 42, 39. ಮತ್ತೆ ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಅಂಕ ಬೇಡ. ಜೈ ಹುಲಿಗೆಮ್ಮ ತಾಯಿ” ಎಂದು ಮತ್ತೊಂದು ಪತ್ರದಲ್ಲಿ ಕೋರಲಾಗಿದೆ.
Comments are closed.