Kalaburagi : ರಸ್ತೆಗೆ ಪಾಕಿಸ್ತಾನ ಧ್ವಜ ಅಂಟಿಸಿದ ಬಜರಂಗದಳ ಕಾರ್ಯಕರ್ತರು – ಧ್ವಜ ತೆಗೆದು ‘ಪಾಕಿಸ್ತಾನ ಪ್ರೇಮ’ ಮೆರೆದ ಮಹಿಳೆಯರು

Kalaburagi : ಕಲಬುರಗಿಯಲ್ಲಿ ಬಜರಂಗದಳ ಕಾರ್ಯಕರ್ತರು ಪೆಹಲ್ಗಾಮ್ ದಾಳಿಯನ್ನು ವಿರೋಧಿಸಿ ಪಾಕಿಸ್ತಾನ ಧ್ವಜವನ್ನು ರಸ್ತೆಗೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಬಂಧನ ಕೆಲವು ಮುಸ್ಲಿಂ ಮಹಿಳೆಯರು ಬಂದು ಆ ಧ್ವಜವನ್ನು ಕಿತ್ತು ಪಾಕ್ ಪ್ರೇಮವನ್ನು ಮೆರೆದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Watch this video carefully
Pakistani flags were placed on the road of Kalburgi, Karnataka in a protest against the #PahalgamTerroristAttack
Everyone drove their vehicle on the Pakistani flags that were placed on the road, but look at the Muslim women,but they say terrorism has… pic.twitter.com/13hlDCj3Hh
— DSH MAX (@team_dsh_1) April 25, 2025
ಹೌದು, ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ. ಇದೇ ವೇಳೆ ಭಜರಂಗದಳ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕ್ ಧ್ವಜಗಳನ್ನು ಇಬ್ಬರು ಬುರ್ಖಾಧಾರಿ ಮಹಿಳೆಯರು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳೆಯರ ಧ್ವಜ ತೆಗೆಯುವ ಮೂಲಕ ಪಾಕ್ ಪ್ರೇಮ ಮೆರೆದಿದ್ದಾರೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇನ್ನು ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುಪ್ತಚರ ಇಲಾಖೆ ಸಿಬ್ಬಂದಿ, ಮತ್ತು ಬ್ರಹ್ಮಪುರ ಠಾಣೆಯ ಪೊಲೀಸರು ಅಂಟಿಸಿದ ಧ್ವಜವನ್ನು ತೆರವುಗೊಳಿಸಿದ್ದಾರೆ.
Comments are closed.