Home News Bhatkal: ಭಟ್ಕಳದಲ್ಲಿ 14 ಪಾಕ್‌ ಪ್ರಜೆಗಳು ದೇಶ ಬಿಡಲ್ಲ!

Bhatkal: ಭಟ್ಕಳದಲ್ಲಿ 14 ಪಾಕ್‌ ಪ್ರಜೆಗಳು ದೇಶ ಬಿಡಲ್ಲ!

Hindu neighbor gifts plot of land

Hindu neighbour gifts land to Muslim journalist

Bhatkal: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್‌ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು ಕೇಂದ್ರ ಸರಕಾರ 48 ಗಂಟೆಗಳ ಗಡುವು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಪಾಕಿಸ್ತಾನಿಯರು ನೆಲೆಸಿದ್ದು, ದೇಶ ತೊರೆಯದೆ ಇಲ್ಲೇ ವಾಸಿಸಬಹುದಾಗಿದೆ.

14 ಮಂದಿ ಪಾಕಿಸ್ತಾನಿ ಮೂಲದವರಾಗಿದ್ದು, ಅವರಲ್ಲಿ 10 ಮಂದಿ ಮಹಿಳೆಯರು. ಇವರು ಸ್ಥಳೀಯರನ್ನು ವಿವಾಹವಾಗಿದ್ದು, ದೀರ್ಘಕಾಲಿನ ವೀಸಾ ಹೊಂದಿದ್ದು, ಪ್ರತಿ 2 ವರ್ಷಕ್ಕೊಮ್ಮೆ ನವೀಕರಿಸಬೇಕಿದೆ. ಇವರು ಭಾರತೀಯ ಪೌರತ್ವವನ್ನು ಪಡೆದಿಲ್ಲ. ಆದರೆ ಸ್ಥಳೀಯರನ್ನು ವಿವಾಹವಾಗಿದ್ದಾರೆ. ಇನ್ನು ಮೂವರು ಈ ಮಹಿಳೆಯರ ಮಕ್ಕಳು. ಆದರೆ ಈಗ ಕೇಂದ್ರ ಸರಕಾರ ಹೊರಡಿಸಿದ ಆದೇಶದಲ್ಲಿ ಸ್ಥಳೀಯರನ್ನು ವಿವಾಹವಾಗಿ ಇಲ್ಲೇ ನೆಲೆಸಿದ ಹಾಗೂ ಅವರಿಗೆ ಹುಟ್ಟಿದ ಮಕ್ಕಳ ಬಗೆಗಿನ ವೀಸಾ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಇವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ಮಹಿಳೆ ಬಾಂಗ್ಲಾದೇಶದ ಮೂಲಕ ಅಕ್ರಮವಾಗಿ ನುಸುಳಿ ಭಟ್ಕಳಕ್ಕೆ ಬಂದು ಇಲ್ಲಿ ಸಂಸಾರ ಮಾಡುತ್ತಿರುವುದು. ಈಕೆಯ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಾಗಾಗಿ ಈಕೆಯ ಮೇಲೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದೇಶ ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.