Home News Kaniyuru: ಕುಮಾರಧಾರ ಹೊಳೆ ಬದಿಗೆ ಹೋಗಿದ್ದ ವ್ಯಕ್ತಿ ಸಾವು!

Kaniyuru: ಕುಮಾರಧಾರ ಹೊಳೆ ಬದಿಗೆ ಹೋಗಿದ್ದ ವ್ಯಕ್ತಿ ಸಾವು!

Picture of a numb hand of a woman showing death or unconsciousness

Hindu neighbor gifts plot of land

Hindu neighbour gifts land to Muslim journalist

Kaniyuru: ಮದ್ಯ ಸೇವಿಸಿ ವ್ಯಕ್ತಿಯೋರ್ವರು ಕುಮಾರಧಾರ ಹೊಳೆಬದಿಗೆ ಹೋಗಿದ್ದ ವ್ಯಕ್ತಿಯೋರ್ವರು ಹೊಳೆಬದಿ ಸಾವಿಗೀಡಾದ ಘಟನೆ ಚಾರ್ವಾಕ ಗ್ರಾಮದಲ್ಲಿ ನಡೆದಿದೆ.

ಸೋಮಶೇಖರ (40) ಮೃತಪಟ್ಟ ವ್ಯಕ್ತಿ.

ಅವಿವಾಹಿತರಾಗಿದ್ದ ಇವರು ಚಾರ್ವಾಕ ಗ್ರಾಮದ ಅಜೇಲು ಎಂಬಲ್ಲಿ ಸಹೋದರಿ ದೇವಕಿ ಅವರ ಮನೆಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಮದ್ಯ ಸೇವಿಸುವ ಅಭ್ಯಾಸ ಇತ್ತು ಎಂದು ವರದಿಯಾಗಿದೆ. ಎ.20 ರಂದು ಬೆಳಿಗ್ಗೆ ಮದ್ಯ ಸೇವಿಸಿ ಕುಮಾರಧಾರ ಹೊಳೆ ಬದಿಗೆ ಹೋದವರು ಸಂಜೆ ತನಕವೂ ಮನೆಗೆ ಬಂದಿರಲಿಲ್ಲ.

ಈ ಕಾರಣದಿಂದ ದೇವಕಿ, ಅವರ ಸಹೋದರ ಬಾಳಪ್ಪರವರು ಸಂಜೆ 7 ಗಂಟೆಗೆ ಕುಮಾರಧಾರ ಹೊಳೆ ಬದಿಯಲ್ಲಿ ಹುಡುಕಿದಾಗ ಹೊಳೆಯ ಬದಿಯಲ್ಲಿನ ಕಲ್ಲಿನ ಮೇಲೆ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿ ಕಂಡು ಬಂದಿದ್ದರು. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಪರಿಶೀಲನೆ ಮಾಡಿದಾಗ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಪ್ರಕರಣದ ಕುರಿತು ದೇವಕಿ ಅವರ ಪುತ್ರ ನಾರಾಯಣ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.