Ayodhya: ಅಯೋಧ್ಯ ರಾಮಮಂದಿರ ಅರ್ಚಕರಿಗೆ ಸಿಗುವ ಸಂಬಳ ಸಂಬಳ ಎಷ್ಟು? ಸೌಲಭ್ಯಗಳೇನು?

Ayodhya : ಅಯೋಧ್ಯೆ ರಾಮ ಮಂದಿರ ನಿರ್ಮಾಣವಾಗಿ ಒಂದು ವರ್ಷ ಕಳೆದಿದೆ ಅಷ್ಟೇ. ಆದರೆ ಈ ಒಂದು ವರ್ಷದಲ್ಲಿ ಮಂದಿರಕ್ಕೆ ಕೋಟ್ಯಾನು ಕೋಟಿ ಭಕ್ತರು ಆಗಮಿಸಿ ರಾಮನ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೋಟಿಗಟ್ಟಲೆ ದೇಣಿಗೆಯನ್ನು ಕೂಡ ನೀಡಿದ್ದಾರೆ. ಒಂದೇ ವರ್ಷದಲ್ಲಿ ರಾಮನ ಮಂದಿರ ದೇಶದ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿ ಮಾರ್ಪಾಡಾಗಿದೆ. ಹಾಗಿದ್ದರೆ ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಎಷ್ಟು ಸಂಬಳ ನೀಡಲಾಗುತ್ತದೆ? ಅವರಿಗೆ ಸಿಗುವ ಸೌಲಭ್ಯಗಳು ಏನು?

ಪ್ರತಿ ತಿಂಗಳು ಪ್ರಧಾನ ಅರ್ಚಕರಿಗೆ ಸಿಗುವ ಸಂಬಳ ಎಷ್ಟು?
ಮಾಧ್ಯಮ ವರದಿಗಳ ಪ್ರಕಾರ, ರಾಮ ದೇವಾಲಯದ ಪ್ರಧಾನ ಅರ್ಚಕ ಪಂಡಿತ್ ಮೋಹಿತ್ ಪಾಂಡೆ ಅವರಿಗೆ 32,900 ರೂ. ಸಂಬಳ ನೀಡಲಾಗುತ್ತಿದೆ. ಜೊತೆಗೆ ಅವರ ಸಹಾಯಕ ಅರ್ಚಕರು 31 ಸಾವಿರ ರೂ. ವೇತನ ಪಡೆಯುತ್ತಾರೆ. ಮೊದಲು ಈ ಸಂಬಳ 25 ಸಾವಿರ ರೂ.ಗಳಿತ್ತು. ಆದರೆ ಈಗ ಹೆಚ್ಚು ಮಾಡಲಾಗಿದೆ.
ಬೇರೆ ಯಾವ ಸೌಲಭ್ಯಗಳಿವೆ?
ವರದಿಗಳ ಪ್ರಕಾರ, ಸಂಬಳದ ಜೊತೆಗೆ, ಪಂಡಿತ್ ಮೋಹಿತ್ ಪಾಂಡೆ ಅವರಿಗೆ ಇತರ ಧಾರ್ಮಿಕ ಚಟುವಟಿಕೆಗಳು, ವಸತಿ, ಪ್ರಯಾಣ ಸೌಲಭ್ಯಗಳು ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆಗಳಿಗೆ ಸಂಬಂಧಿಸಿದ ಅಗತ್ಯ ಸೌಲಭ್ಯಗಳನ್ನು ಟ್ರಸ್ಟ್ ಒದಗಿಸುತ್ತಿದೆ
Comments are closed.