Mangalapuram Cinema: ʼಮಂಗಳಾಪುರಂʼ ಸಿನಿಮಾ ಫಸ್ಟ್‌ ಲುಕ್‌ ಬಿಡುಗಡೆ!

Share the Article

Mangalapuram Cinema: ನಟ ರಿಷಿ ಅವರು ಹೊಸ ಕನ್ನಡ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಮಂಗಳಾಪುರಂ ಎಂಬುದು ಈ ಸಿನಿಮಾದ ಶೀರ್ಷಿಕೆ. ಈಗ ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಮಂಗಳೂರು ಮೂಲದ ಹೊಸ ಟೀಮ್‌ ಜೊತೆ ನಟ ರಿಷಿ ಕೈ ಜೋಡಿಸಿದ್ದು, ಮೊದಲು ತುಳು ಭಾಷೆಯಲ್ಲಿ ʼಉಮಿಲ್‌ʼ ಮತ್ತು ʼದೊಂಬರಾಟʼ ಸಿನಿಮಾಗಳಿಗೆ ಆಕ್ಷನ್-ಕಟ್‌ ಹೇಳಿ ನಂತರ ರಂಜಿತ್‌ ರಾವ್‌ ಸುವರ್ಣ ಅವರು ಈಗ ʼಮಂಗಳಾಪುರಂʼ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ರಿಷಿ ಜೊತೆ ಕಾಶಿನಾಥ್‌ ಪುತ್ರ ಅಭಿಮನ್ಯು ಕಾಶೀನಾಥ್‌ ಕೂಡಾ ನಟಿಸುತ್ತಿದ್ದಾರೆ. ಜೂನ್‌ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್‌ ಆರಂಭವಾಗಲಿದೆ. ತೀರ್ಥಹಳ್ಳಿ, ಕಾರ್ಕಳ, ಮಡಿಕೇರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅನೂಪ್‌ ಸಿಲೀನ್‌ ಈ ಸಿನಿಮಾಗೆ ಸಂಗೀತ ನೀಡಲಿದ್ದಾರೆ. ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣವಿರಲಿದೆ.

Comments are closed.