Uppinangady: ಅಪ್ರಾಪ್ತೆಯ ಜೊತೆ ದೈಹಿಕ ಸಂಪರ್ಕ; POCSO ಕೇಸ್ ದಾಖಲು, ಆರೋಪಿ ಬಂಧನ

Nelyadi: ಅಪ್ರಾಪ್ತೆಯ ಜೊತೆ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದಲ್ಲಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತ್ರಸ್ತೆ 16 ವರ್ಷದವಳಾಗಿದ್ದು, ಪಿಯುಸಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟು, ಮನೆಯಲ್ಲಿದ್ದು, ದೂರದ ಸಂಬಂಧಿಕನಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ಮನೆಗೆ ಫೆ.10 ರಂದು ಹೋಗಿದ್ದಾಳೆ. ಆ ದಿನ ರಾತ್ರಿ ಊಟ ಮಾಡಿ ಮಲಗಿದ್ದ ಸಮಯದಲ್ಲಿ ಆರೋಪಿ ರಮೇಶ ಆಕೆ ಮಲಗಿದ್ದಲ್ಲಿಗೆ ಬಂದು ಬಲಾತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ.
ಅನಂತರ ಮಾ.9, 27, 28 ರಂದು ಸಂತ್ರಸ್ತೆಯ ಇಚ್ಛೆಯ ವಿರುದ್ಧ ದೈಹಿಕ ಸಂಪರ್ಕ ಮಾಡಿದ್ದಾನೆ. ಸಂತ್ರಸ್ತೆಯನ್ನು ಮಂಗಳೂರು ಕಾವೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿರುವ ಕುರಿತು ವರದಿಯಾಗಿದೆ.
Comments are closed.