Heggade Community: ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾಗಿ ಕೊರಕುಟ್ಟಿರ ಸರಾ ಚಂಗಪ್ಪ ಅಯ್ಕೆ

Heggade Community: ಕೊಡಗು(Kodagu) ಹೆಗ್ಗಡೆ ಸಮಾಜದ ನಿರ್ಗಮಿತ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪನವರ ಉಸ್ತುವಾರಿಯಲ್ಲಿ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ವಿವಿಧ ವಲಯಗಳಿಂದ ಅಯ್ಕೆಯಾದ ಹದಿನಾಲ್ಕು ಮಂದಿ ಚುನಾಯಿತ ಪ್ರತಿನಿಧಿಗಳು 2025-30ರ ಆವಧಿಗೆ ಅಧ್ಯಕ್ಷರಾಗಿ ಕೊರಕುಟ್ಟಿರ ಸರಾ ಚಂಗಪ್ಪ, ಉಪಾಧ್ಯಕ್ಷರಾಗಿ ಚರ್ಮಂಡ ಅಪ್ಪುಣು ಪೂವಯ್ಯ, ಗೌರವ ಕಾರ್ಯದರ್ಶಿಯಾಗಿ ಪಡಿಞರಂಡ ಪ್ರಭು ಕುಮಾರ್, ಕೊಷಧ್ಯಕ್ಷರಾಗಿ ಕೊರಂಡ ಪ್ರಕಾಶ್ ನಾಣಯ್ಯ ನವನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನಿರ್ದೆಶಕರುಗಳಾಗಿ ಅಯ್ಕಿಯಾದ ಕೊಂಗೆಪ್ಪಂಡ ರವಿ, ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ತಂಬಂಡ ಮಂಜುನಾಥ್, ಕೊಕ್ಕೇರ ಜಗನಾಥ್, ತೊರೇರ ರಾಜ ಪೂವಯ್ಯ, ಪಂದಿಕಂಡ ಕುಶದಿನೇಶ್, ಚಳಿಯಂಡ ಕಮಲಾ ಉತ್ತಯ್ಯ, ಮೂರೀರ ಶಾಂತಿ, ಪೊಟ್ಟಂಡ ವಸಂತಿ ಗಣೇಶ್ ಹಾಜರಿದ್ದರು. ನಿರ್ಗಮಿತ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ನವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪನವರಿಗೆ ಅಧಿಕಾರ ಹಸ್ತಾಂತರಿಸಿದರು.
ತದ ನಂತರ ಸರ ಚಂಗಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಅಡಳಿತ ಮಂಡಳಿಯ ಸಭೆಯಲ್ಲಿ ಕ್ರೀಡಾ ಕ್ಷೇತ್ರದಿಂದ ಪಂದಿಕಂಡ ನಾಗೇಶ್, ಅಡಳಿತ ಮಂಡಳಿಯ ಲೆಕ್ಕಪರಿಶೋಧನೆ ಮತ್ತು ಅಂತರಿಕ ವ್ಯವಹಾರದ ಮೇಲುಸ್ತುವಾರಿ ದೃಷ್ಟಿಯಿಂದ ತೊರೇರ ಮುದ್ದಯ್ಯ, ಮಹಿಳಾ ಕ್ಷೇತ್ರದಿಂದ ಮಳ್ಳಾಡ ಸುಥಾ ರವರ ಅಯ್ಕೆ ಪ್ರಕ್ರೀಯೆ ನಡೆಯಿತು. ನಂತರ ಮಾತನಾಡಿದ ಅಧ್ಯಕ್ಷರಾದ ಕೊರಕುಟ್ಟಿರ ಸರಾಚಂಗಪ್ಪ, ಮುಂದಿನ ಅಡಳಿತ ಅವಧಿಯಲ್ಲಿ ಜನಾಂಗ ಭಾಂಧವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಕಾರದೊಂದಿಗೆ ಸಮಾಜದ ಪ್ರಗತಿಗೆ ಶ್ರಮಿಸಿವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ಚರ್ಮಾಂಡ ಪೂವಯ್ಯನವರು ಹಿರಿಯರು ಹಾಕಿಕೊಟ್ಟ ಅಡಿಪಾಯದಂತೆ ಸಮಾಜದ ಪ್ರಗತಿಗೆ ಅಡಳಿತ ಮಂಡಳಿಯವರು ಶ್ರಮೀಸೋಣವೆಂದು ಕರೆ ನೀಡಿದರು. ಕಾರ್ಯದರ್ಶಿಗಳಾದ ಪಡಿಞರಂಡ ಪ್ರಭುಕುಮಾರ್ ವಂದಿಸಿದರು.

Comments are closed.