R.Ashok: ರಾಜ್ಯದಲ್ಲಿ ಶಿವದಾರ, ಉಡುದಾರ, ಜನಿವಾರಕ್ಕೆ ಕತ್ತರಿ, ಹಿಜಾಬ್‌ಗೆ ಬಹುಪರಾಕ್- ಆರ್.ಅಶೋಕ್ ವಾಗ್ದಾಳಿ

R.Ashok: ಜನಿವಾರ ವಿವಾದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಕಾಂಗ್ರೆಸ್ ಸರಕಾರದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ʼ ರಾಜ್ಯದಲ್ಲಿ ಶಿವದಾರ, ಉಡುದಾರ, ಜನಿವಾರಕ್ಕೆ ಕತ್ತರಿ ಸರಕಾರ ಕತ್ತರಿ ಹಾಕುತ್ತಿದೆ. ಇವುಗಳನ್ನು ಬಂದ್ ಮಾಡುವ ರೀತಿ ನಡೆದುಕೊಳ್ಳುತ್ತಿದೆ. ಹಿಜಾಬ್‌ಗೆ ಮಾತ್ರ ಬಹುಪರಾಕ್ ಎನ್ನಲಾಗುತ್ತಿದೆʼ ಎಂದು ಕಿಡಿಕಾರಿದರು.

ಹೆಣ್ಮಕ್ಕಳ ತಾಳಿ, ಕಾಲುಂಗುರಕ್ಕೂ ಅವಕಾಶ ನೀಡದ ಸ್ಥಿತಿ, ಜನಿವಾರ ಹಾಕಿದವರನ್ನೂ, ಮಾಂಗಲು, ಕಾಲುಂಗುರವನ್ನೂ ಚೆಕ್ ಮಾಡುತ್ತಾರೆ. ಆದರೆ ಹಿಜಾಬ್, ಬುರ್ಖಾ ಹಾಕಿದವರಿಗೆ ಎಲ್ಲೂ ಚೆಕಿಂಗ್ ಇಲ್ಲ. ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂಗಳನ್ನು ದಮನ ಮಾಡುತ್ತಿದೆ, ಅವಮಾನ ಮಾಡುತ್ತಿದೆ. ಹಿಂದೂಗಳಿಗೆ ಅವಮಾನ ಮಾಡಿದರೆ ಕಾಂಗ್ರೆಸ್‌ಗೆ ವಿಕೃತ ಸಂತೋಷವಾಗುತ್ತದೆ ಎಂದು ಹೇಳಿದರು.
Comments are closed.