Bidar: ಜನಿವಾರ ವಿವಾದ – CET ಪರೀಕ್ಷೆ ವಂಚಿತ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಉಚಿತ ಸೀಟ್, ಸಚಿವರ ಭರವಸೆ

Share the Article

Bidar: ಬೀದರ್ ನಲ್ಲಿ ಜನಿವಾರ ತೆಗೆಯದ್ದಕ್ಕೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಿಂದಲೇ ವಂಚಿತನಾಗಿದ್ದ. ಬಳಿಕ ಈ ವಿದ್ಯಾರ್ಥಿಗೆ ನ್ಯಾಯ ಕೊಡಿಸುವಂತೆ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಸಚಿವರು ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದು, ಉಚಿತ ಸೀಟ್ ಕೊಡಿಸುವ ಭರವಸೆ ನೀಡಿದ್ದಾರೆ.

ಹೌದು, ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಸುಚಿವೃತ ಕಲಕರ್ಣಿ ಮನೆಗೆ ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್ ಭೇಟಿ ನೀಡಿದ್ದಾರೆ. ಬೀದರ್ ನ ಓಲ್ಡ್ ಸಿಟಿಯಲ್ಲಿರುವ ಸುಚಿವೃತ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿರುವ ಸಚಿವರು ಉಚಿತ ಸೀಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಚಿವೃತ ಕುಲಕರ್ಣಿಗೆ ಉಚಿತ ಸೀಟು ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿ, ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

Comments are closed.