Bangalore Airport: ವಿಮಾನ- ಟೆಂಪೋ ಡಿಕ್ಕಿ, ಹಲವರಿಗೆ ಗಾಯ!

Bangalore Airport: ಇಲ್ಲಿನ ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಮತ್ತು ಟೆಂಪೋ ಮಧ್ಯೆ ಡಿಕ್ಕಿ ಸಂಭವಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ವಿಮಾನದ ಇಂಜಿನ್ ರಿಪೇರಿಯಿಂದಾಗಿ ವಿಮಾನ ಕೆಟ್ಟು ನಿಂತಿತ್ತು. ಆಗ ಟಿಟಿ ವಾಹನ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದೆ.
ಡಿಕ್ಕಿಯ ರಬ್ಬಸಕ್ಕೆ ಟಿಟಿ ವಾಹನದ ಟಾಪ್ ನುಚ್ಚುಗುಜ್ಜಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಟಿಟಿ ಚಾಲಕ ಪಾರಾಗಿದ್ದಾರೆ. ಕೆಲ ದಿನಗಳಿಂದ ಇಂಡಿಗೋ ವಿಮಾನ ಕೆಟ್ಟ ನಿಂತಿತ್ತು. ಚಾಲಕನ ಅಜಾಗರೂಕತೆಯಿಂದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ.
ವಿಮಾನಕ್ಕೆ ಸಿಬ್ಬಂದಿಯನ್ನು ಟಿಟಿ ವಾಹನದ ಮೂಲಕ ಕರೆದೊಯ್ಯುವ ವೇಳೆ ಘಟನೆ ನಡೆದಿದೆ. ಸಿಬ್ಬಂದಿ ಬಿಟ್ಟು ಬರುವಾಗ ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆಯಿಂದ ತನಿಖೆ ಕೈಗೊಳ್ಳಲಾಗಿದೆ.
Comments are closed.